ಹೌದು, ಭಾರತದಲ್ಲಿ ಈಗ ಯುಪಿಐ ಬಳಕೆ ಹೆಚ್ಚಾಗುತ್ತಿದ್ದು, ಸದ್ಯ ಆಗಸ್ಟ್ 1 ರಿಂದ NPCI ಕೆಲವೊಂದು ಹೊಸ ನಿಯಮಗಳನ್ನು ಜಾರಿಗೆ ತರಲಿದ್ದು, ಆಗಸ್ಟ್ 1 ರಿಂದ UPI ಬಳಕೆದಾರರಿಗೆ ಶಾಕ್ ನೀಡಲಿದೆ ಈ ಹೊಸ ನಿಯಮ ! ಈ ನಿಯಮ ಫೋನ್ ಪೇ, ಗೂಗಲ್ ಪೇ, ಪೇಟಿಯಂ ಸೇರಿದಂತೆ ಎಲ್ಲಾ UPI ಆಪ್ ಬಳಕೆದಾರರಿಗೂ ಈ ಹೊಸ ನಿಯಮ ಅನ್ವಯಿಸಲಿದೆ.
ಏನಿದು ಹೊಸ UPI ನಿಯಮ?

UPI ಬಳಕೆಯಲ್ಲಿ ಸರ್ವರ್ ಮೇಲಿನ ಒತ್ತಡ ತಗ್ಗಿಸಲು ಕೆಲವೊಂದು ಬದಲಾವಣೆ ತರಲಾಗಿದ್ದು, ಇದರಂತೆ ಇನ್ಮುಂದೆ ಯುಪಿಐ ಬಳಸುವ ಎಲ್ಲಾ ಆ್ಯಪ್ ಗಳಲ್ಲಿ ಬ್ಯಾಲನ್ಸ್ ಚೆಕ್ ಗೆ ಕಡಿವಾಣ ಹಾಕಿದೆ, ಇದರಂತೆ ಇನ್ಮುಂದೆ ನೀವು ದಿನದಲ್ಲಿ ಗರಿಷ್ಠ 50 ಬಾರಿ ಮಾತ್ರ ಬ್ಯಾಲನ್ಸ್ ಚೆಕ್ ಮಾಡಬಹುದು.
CIBIL Score ಫ್ರೀ ಆಗಿ ಚೆಕ್ ಮಾಡುವುದು ಹೇಗೆ? ಇಲ್ಲಿದೆ ವಿಧಾನ
ಇನ್ನು ನಿಮ್ಮ ಅಕೌಂಟ್ ನ ಖಾತೆಯ ವಿವರವನ್ನು ದಿನದಲ್ಲಿ 25 ಬಾರಿ ಮಾತ್ರ ಪರಿಶೀಲಿಸಬಹುದಾಗಿದೆ.
ಇನ್ನು ಆಟೋ UPI ಡೆಬಿಟ್ ನಲ್ಲಿಯೂ ಬದಲಾವಣೆ ತಂದಿದ್ದು, ಬೆಳಿಗ್ಗೆ 10ಗಂಟೆಗೂ ಮುನ್ನ, ಮಧ್ಯಾಹ್ನ 1ರಿಂದ 5 ಹಾಗೂ ರಾತ್ರಿ 9.30 ನಂತರ ಹೀಗೆ 3 ಪ್ರತ್ಯೇಕ ಸ್ಲಾಟ್ ಗಳೇ ಮಾತ್ರ ಪಾವತಿಯಾಗುವಂತೆ ಮಾಡಲಾಗುತ್ತದೆ.
ಆಗಸ್ಟ್ ಮೊದಲ ವಾರದಲ್ಲಿ ಪಿಎಂ ಕಿಸಾನ್ 20ನೇ ಕಂತಿನ ಹಣ ಬಿಡುಗಡೆ?
ಇನ್ನು ನಿಮ್ಮ ವಹಿವಾಟುಗಳ ಪ್ರಕ್ರಿಯ ಸಮಯದಲ್ಲಿ ಮೂರು ಬಾರಿ ಮಾತ್ರ ಪರಿಶೀಲಸಿಲು ಹಾಗೂ 90ಸೆಕೆಂಡ್ ಗಳ ನಂತರವಷ್ಟೇ refresh ಮಾಡುವ ಆಯ್ಕೆ ನೀಡಲಾಗುತ್ತದೆ.
ಈ ಕೆಲವೊಂದು ಬದಲಾವಣೆ ಆಗಸ್ಟ್ 1ರಿಂದ ಜಾರಿಯಾಗಲಿದ್ದು, UPI ಸರ್ವರ್ ಸಮಸ್ಯೆ ತಪ್ಪಿಸಲು ಈ ಯೋಜನೆ ರೂಪಿಸಲಾಗಿದೆ.
Yashasvi Scholarship ಪಿಎಂ ಯಶಸ್ವಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ, ಇಲ್ಲಿದೆ ವಿವರ
ಈ ಮೂಲಕ ಅನಗತ್ಯ ವಿನಂತಿಗಳು ಕಡಿವಾಣ ಬೀಳಲಿದ್ದು, ಸರ್ವರ್ ಸಮಸ್ಯೆಗೆ ಕಡಿವಾಣ ಬೀಳಲಿದೆ, ಒಟ್ಟಾರೆ ಈ ಹೊಸ ನಿಯಮದಿನ ಸಾಮಾನ್ಯ ಜನರಿಗೆ ಯಾವುದೇ ಪರಿಣಾಮ ಬೀಳುವುದಿಲ್ಲ, ಅನಗತ್ಯ ಸ್ಕ್ರಾಲ್ ಗೆ ಮಾತ್ರ ಬ್ರೇಕ್ ಬೀಳಬಹುದು.