PM Vishwakarma Yojane: ಈ ಯೋಜನೆಯಲ್ಲಿ ರೂ.15,000 ಟೂಲ್ ಕಿಟ್, 3 ಲಕ್ಷ ಸಹಾಯಧನ ಪಡೆಯಿರಿ

Share this page

ಕೇಂದ್ರ ಸರ್ಕಾರವು ಗ್ರಾಮೀಣ ಹಾಗೂ ನಗರ ಪ್ರದೇಶದ ಸಾಂಪ್ರದಾಯಕ ಕುಶಲಕರ್ಮಿ ಕರಕುಶಲ ವೃತ್ತಿಯನ್ನು ಉತ್ತೇಜಿಸಲು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ (PM Vishwakarma Yojane) ಜಾರಿಗೆ ತಂದಿದ್ದು, ಈ ಯೋಜನೆಯಲ್ಲಿ ಸಹಾಯಧನ ಪಡೆಯಲು ಯಾರು ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ ಇದೆಲ್ಲವನ್ನು ಈ ಲೇಖನದಲ್ಲಿ ತಿಳಿಯಬಹುದಾಗಿದೆ.

WhatsApp Group Join Now
Telegram Group Join Now
PM Vishwakarma Yojane

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ (PM Vishwakarma Yojane)

ಈ ಯೋಜನೆಯ ಮೂಲಕ ಭಾರತದ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿನ ಸಾಂಪ್ರದಾಯಕ ಕರಕುಶಲ ಹಾಗೂ ಕುಶಲಕರ್ಮಿಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಹಾಗೂ ಈ ಕೆಲಸವನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರ 3 ಲಕ್ಷದ ತನಕ ಸಹಾಯಧನ ನೀಡುತ್ತಿದೆ.

ಈ ಯೋಜನೆಯಲ್ಲಿ ವಿಶ್ವಕರ್ಮ ಕುಲಕಸುಬುದಾರರಿಗೆ 3 ಲಕ್ಷದ ತನಕ ಆಧಾರ ರಹಿತ ಸಾಲ ನೀಡಲಾಗುತ್ತದೆ.

ಜೊತೆಗೆ ಈ ಕುಲಕಸುಬಿನ ಕೌಶಲ್ಯಾಭಿವೃದ್ಧಿಗೆ 5 ರಿಂದ 7 ದಿನಗಳ ತರಬೇತಿ ನೀಡಲಾಗುತ್ತದೆ, ಹಾಗೂ 500 ರೂ. ಗಳ ದೈನಂದಿನ ಸಂಭಾವನೆ ನೀಡಲಾಗುತ್ತದೆ, ಹಾಗೂ 15 ಸಾವಿರ ರುಪಾಯಿವರೆಗಿನ ಟೂಲ್ ಕಿಟ್ ನೀಡಲಾಗುತ್ತದೆ.

PM Awas Yojana 2024: ಪಿಎಂ ಆವಾಸ್ ಯೋಜನೆಯಲ್ಲಿ ಉಚಿತ ಮನೆ ಅಥವಾ ಹೋಮ್ ಲೋನ್ ಪಡೆಯಲು ಅರ್ಜಿ ಸಲ್ಲಿಸಿ

ತರಬೇತಿಯ ನಂತರ ತಯಾರಾದ ಉತ್ಪನ್ನಗಳಿಗೆ ಸರ್ಟಿಫಿಕೆಟ್, ಹಾಗೂ ಮಾರ್ಕೆಟಿಂಗ್ ಗೆ ನೆರವು ನೀಡಲಾಗುತ್ತದೆ.

ಮೊದಲಿಗೆ 5% ದಂತೆ 1ಲಕ್ಷದ ತನಕ ಸಾಲ ನೀಡಲಾಗುತ್ತದೆ, ನಂತರ 2ಲಕ್ಷ ನೀಡಲಾಗುತ್ತದೆ.

PM Vishwakarma Yojane ಗೆ ಯಾರು ಅರ್ಜಿ ಸಲ್ಲಿಸಬಹುದು?

ಈ ಯೋಜನೆಯಲ್ಲಿ ಮರಕೆಲಸಗಾರರು, ವಿಗ್ರಹ ತಯಾರಕರು, ಅಕ್ಕಸಾಲಿಗರು, ಅಗಸರು, ಟೈಲರ್ ಗಳು, ಬುಟ್ಟಿ, ಚಾಪೆ, ಪೊರಕೆ ತಯಾರಕರು, ಕ್ಷೌರಿಕರು, ಮೀನು ಬಲೆ ತಯಾರಕರು, ಕಮ್ಮಾರರರು , ಆಯುಧ ತಯಾರಕರು, ಆಟಿಕೆ ತಯಾರಿಕೆ, ಮಡಿಕೆ ಮಾಡುವವರು ಹೀಗೆ ಸಣ್ಣ ಕೈಗಾರಿಕೆ ಮಾಡುತ್ತಿರುವವರು ಈ ಯೋಜನಯಡಿಯಲ್ಲಿ ಲಾಭ ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಸಲು ಇರಬೇಕಾದ ದಾಖಲೆಗಳು :

ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಆಧಾರ್ ಲಿಂಕ್ ಆಗಿರುವ ಮೊಬೈಲ್ ನಂಬರ್, ಹಾಗೂ ಬ್ಯಾಂಕ್ ಖಾತೆ ಹೊಂದಿರಬೇಕು.

ಎಲ್ಲಿ ಅರ್ಜಿ ಸಲ್ಲಿಸಬೇಕು?

ಈ ಯೋಜನೆಯ ಲಾಭ ಪಡೆಯಲು ನೀವು ಮೇಲೆ ತಿಳಿಸಿದ ದಾಖಲೆಗಳೊಂದಿಗೆ ಹತ್ತಿರದ ಗ್ರಾಮ ಒನ್, CSC ಡಿಜಿಟಲ್ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ವಿವರಗಳನ್ನು https://pmvishwakarma.gov.in ವೆಬ್ಸೈಟ್ ನಲ್ಲಿ ಪಡೆದುಕೊಳ್ಳಿ.

ಇದನ್ನೂ ಓದಿ : ಪಿಎಂ ಕಿಸಾನ್ ಯೋಜನೆಯಲ್ಲಿ 6,000 ರೂ. ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ: PM Kisan Samman Nidhi Scheme

ಇದನ್ನೂ ಓದಿ : 120 ಕಿಮೀ ಮೈಲೇಜ್ ನೀಡುವ 95 ಸಾವಿರ ಬೆಲೆಯ ಮೊದಲ ಸಿಎನ್‌ಜಿ ಬೈಕ್ ಬಿಡುಗಡೆ


Share this page
WhatsApp Group Join Now
Telegram Group Join Now