ಪಿಎಂ ಕಿಸಾನ್ ಯೋಜನೆಯಲ್ಲಿ 6,000 ರೂ. ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ: PM Kisan Samman Nidhi Scheme

Share this page

PM Kisan Samman Nidhi Scheme: ಪ್ರಧಾನ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan) ಯೋಜನೆಯಡಿಯಲ್ಲಿ ರೈತರು ವಾರ್ಷಿಕವಾಗಿ 6,000 ರೂ. ಪಡೆಯಬಹುದಾಗಿದ್ದು, ಈ ಯೋಜನೆಯ ವಿವರ, ಅರ್ಹತೆಗಳು, ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗೆ ವಿವರವಾಗಿ ನೀಡಿದ್ದೇವೆ.

WhatsApp Group Join Now
Telegram Group Join Now
ಪಿಎಂ ಕಿಸಾನ್ ಯೋಜನೆಯಲ್ಲಿ 6,000 ರೂ. ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ: PM Kisan Samman Nidhi Scheme
PM Kisan Samman Nidhi Scheme

PM Kisan Samman Nidhi Scheme (ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ) :

ಈ ಯೋಜನೆಯು 1.12.2018 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದು, ಈ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಕೃಷಿಕರಿಗೆ ವಾರ್ಷಿಕವಾಗಿ ಒಟ್ಟು 6,000 ರೂ. ಗಳನ್ನು (4 ತಿಂಗಳಿಗೊಮ್ಮೆ 3 ಕಂತುಗಳ ರೂಪದಲ್ಲಿ ರೂ. 2000 ರಂತೆ) ನೇರವಾಗಿ ಖಾತೆಗೆ ವರ್ಗಾಯಿಸುತ್ತಿದೆ.

ಕೇಂದ್ರ ಸರ್ಕಾರವು ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ತಮ್ಮ ಕೃಷಿ ಚಟುವಟಿಕೆ ನೆಡೆಸಲು ಸಣ್ಣ ಪ್ರಮಾಣದ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಈ ಯೋಜನೆ ಆರಂಭಿಸಿದ್ದು, ಈ ಯೋಜನೆಯಿಂದ ರೈತರಿಗೆ ಸಹಾಯಕವಾಗಲಿದೆ.

2019 ರಿಂದ ಇಲ್ಲಿಯವರೆಗೆ ಈ ಯೋಜನೆಯಲ್ಲಿ ಈಗಾಗಲೇ 17 ಕಂತು ಗಳಲ್ಲಿ ರೈತರಿಗೆ ಹಣ ಜಮೆ ಮಾಡಲಾಗಿದೆ, ಮೊದಲನೇ ಕಂತಿನಲ್ಲಿ ಸುಮಾರು 3 ಕೋಟಿಗೂ ಅಧಿಕ ರೈತರು ಈ ಯೋಜನೆಯ ಲಾಭ ಪಡೆದಿದ್ದು, ಈಗ 11 ಕೋಟಿಗೂ ಅಧಿಕ ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳಿದ್ದಾರೆ.

PM Awas Yojana 2024: ಪಿಎಂ ಆವಾಸ್ ಯೋಜನೆಯಲ್ಲಿ ಉಚಿತ ಮನೆ ಅಥವಾ ಹೋಮ್ ಲೋನ್ ಪಡೆಯಲು ಅರ್ಜಿ ಸಲ್ಲಿಸಿ

ಪಿಎಂ ಕಿಸಾನ್ ಯೋಜನೆಯ ನಿಯಮಗಳು :

ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಹೆಸರಲ್ಲಿ ಕೃಷಿ ಭೂಮಿ ಹೊಂದಿರಬೇಕು.

ನಿಮ್ಮ ಜಮೀನು ಖರೀದಿಸಿದ್ದಲ್ಲಿ ನೀವು 2019 ಕ್ಕಿಂತ ಮೊದಲೇ ಖರೀದಿಸಿರಬೇಕು, 2019 ರ ನಂತರದ ಆರ್.ಟಿ.ಸಿ ಹೊಂದಿದಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಆಗುವುದಿಲ್ಲ.

ನಿಮ್ಮ ತಂದೆ ತಾಯಿಂದ ಬಂದಿರುವ ಪೌತಿ ಖಾತೆಯಲ್ಲಿ ನಿಮಗೆ ಜಾಗ ದೊರೆತಿದ್ದಲ್ಲಿ ನೀವು ಅರ್ಜಿ ಸಲ್ಲಿಸಬಹುದಾಗಿದೆ.

ನೀವು ಆದಾಯ ತೆರಿಗೆ ಅಥವಾ IT return ಪಾವತಿಸುತ್ತಿದ್ದಲ್ಲಿ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ.

ಒಂದು ರೇಷನ್ ಕಾರ್ಡ್ ನಲ್ಲಿ ಒಬ್ಬರು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ.

ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರದ ಹುದ್ದೆಯಲ್ಲಿದ್ದರೆ, ಸರ್ಕಾರಿ ನೌಕರರಾಗಿದ್ದಲ್ಲಿ ಅರ್ಜಿ ಸಲ್ಲಿಸುವಂತಿಲ್ಲ.

ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ :

ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದಾರೆ ನಿಮ್ಮ ಹತ್ತಿರ CSC ಕಂಪ್ಯೂಟರ್ ಸೆಂಟರ್, ಗ್ರಾಮ ಒನ್ ಅಥವಾ ಕೃಷಿ ಅಥವಾ ತೋಟಗಾರಿಕೆ ಇಲಾಖೆಗೆ ತೆರಳಿ, ನಿಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್, ಫೋಟೋ, ಜಮೀನಿನ ಆರ್.ಟಿ.ಸಿ, ರೇಷನ್ ಕಾರ್ಡ್, ಬ್ಯಾಂಕ್ ಖಾತೆ ದಾಖಲಾತಿಗಳನ್ನು ನೀಡಿ ಹೊಸ ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ

ಇನ್ನು ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ https://pmkisan.gov.in/ ಗೆ ಭೇಟಿ ನೀಡಿ, new former registration ಆಯ್ಕೆಯಲ್ಲಿ ನೀವೇ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಇದೇ ರೀತಿಯ ಇನ್ನಷ್ಟು ಮಾಹಿತಿಗಾಗಿ ನೀವು ನಮ್ಮ iBoxKannada ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ.

ಇದನ್ನೂ ಓದಿ :

ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ 5,000 ರೂ. ನೇರವಾಗಿ ಮಹಿಳೆಯರ ಖಾತೆಗೆ ಜಮೆ, Pradhan Mantri Matru Vandana yojana

PM Vishwakarma Yojane: ಈ ಯೋಜನೆಯಲ್ಲಿ ರೂ.15,000 ಟೂಲ್ ಕಿಟ್, 3 ಲಕ್ಷ ಸಹಾಯಧನ ಪಡೆಯಿರಿ

ಈ ಒಂದು ಆ್ಯಪ್ ಇದ್ದರೆ ಸಾಕು, ಗೃಹಲಕ್ಷ್ಮಿ, ಅನ್ನಭಾಗ್ಯ ಸೇರಿದಂತೆ ಎಲ್ಲಾ ಯೋಜನೆಯ ಹಣದ ಮಾಹಿತಿ ಪಡೆಯಿರಿ : DBT Karnataka

ನಿಮ್ಮ ಆಧಾರ್ ಕಾರ್ಡ್ ಹೀಗೆ ತಕ್ಷಣ ಡೌನ್ಲೋಡ್ ಮಾಡಿರಿ : Aadhaar card download


Share this page
WhatsApp Group Join Now
Telegram Group Join Now

10 thoughts on “ಪಿಎಂ ಕಿಸಾನ್ ಯೋಜನೆಯಲ್ಲಿ 6,000 ರೂ. ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ: PM Kisan Samman Nidhi Scheme”

Leave a Comment