RTC Aadhaar Card link ಕಡ್ಡಾಯ, ಮೊಬೈಲ್ ನಲ್ಲಿ 2 ನಿಮಿಷದಲ್ಲಿ ಆರ್ಟಿಸಿಗೆ ಆಧಾರ್ ಲಿಂಕ್ ಮಾಡುವ ವಿಧಾನ ಇಲ್ಲಿದೆ.

Share this page

RTC Aadhaar Card link: ಸ್ನೇಹಿತರೇ, ನಿಮಗೆಲ್ಲಾ ತಿಳಿದೇ ಇದೆ ಈಗ ಸರ್ಕಾರವು ನಿಮ್ಮ ಪಹಣಿಗೆ (RTC) ಆಧಾರ್ ಕಾರ್ಡ್ ಲಿಂಕ್ ಕಡ್ಡಾಯಗೊಳಿಸಿದ್ದು, ನಿಮ್ಮ ಹೆಸರಿನಲ್ಲಿರುವ ಎಲ್ಲಾ ಜಮೀನಿನ ಜೊತೆ ನಿಮ್ಮ ಆಧಾರ್ ಲಿಂಕ್ ಮಾಡಿಸಬೇಕು, ಇದನ್ನು ನೀವು ನಿಮ್ಮ ಮೊಬೈಲ್ / ಕಂಪ್ಯೂಟರ್ ಮೂಲಕವೇ ಮಾಡಿಸಬಹುದಾಗಿದ್ದು, ಇಲ್ಲಿ ನಾವು ಲಿಂಕ್ ಮಾಡುವ ವಿಧಾನ ವಿವರವಾಗಿ ನೀಡಿದ್ದೇವೆ.

WhatsApp Group Join Now
Telegram Group Join Now

RTC Aadhaar Card link ಕಡ್ಡಾಯ :

ಹೌದು, ಸರ್ಕಾರದ ಅಧಿಸೂಚನೆಯಲ್ಲಿ ಪ್ರತಿಯೊಬ್ಬರೂ ತಮ್ಮ ಜಮೀನಿನ RTC ಜೊತೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಮಾಡಿಸಲೇಬೇಕೆಂದು ತಿಳಿಸಿದ್ದು, ಅಲ್ಲದೆ ಲಿಂಕ್ ಮಾಡಿಸಲು ಕಳೆದ ಜೂನ್ 30 ಕೊನೆಯ ದಿನಾಕವೆಂದು ತಿಳಿಸಿತ್ತು, ಆದರೆ ಕರ್ನಾಟಕದಲ್ಲಿ ಅರ್ಧದಷ್ಟು ಜನರು ಇನ್ನೂ ಲಿಂಕ್ ಮಾಡಿಸದೇ ಇರುವ ಕಾರಣ ಈಗ ಜುಲೈ 31 ರ ತನಕ ಲಿಂಕ್ ಮಾಡಿಸಲು ಅವಕಾಶ ನೀಡಿದೆ.

ಪಹಣಿ ಜೊತೆ ಆಧಾರ್ ಲಿಂಕ್ ಉಪಯೋಗವೇನು?

ರೈತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು, ಅಥವಾ ಸರ್ಕಾರವು ರೈತರನ್ನು ಗುರುತಿಸಿ ಅವರಿಗೆ ಸೌಲಭ್ಯಗಳನ್ನು ತ್ವರಿತವಾಗಿ ತಲುಪಿಸಲು, ಈ ಆಧಾರ್ ಲಿಂಕ್ ಸಹಾಯಕವಾಗಲಿದೆ.

ಈಗ ಸರ್ಕಾರದಿಂದ ಎಲ್ಲಾ ಹಣಪಾವತಿಯು ಡಿಬಿಟಿ ಮುಖಾಂತರ ನೇರವಾಗಿ ರೈತರ ಖಾತೆಗೆ ಜಮೆಯಾಗಲಿದ್ದು, ಬರ ಪರಿಹಾರ, ಬೆಳೆ ಪರಿಹಾರ ಇತ್ಯಾದಿಗಳಲ್ಲಿ ರೈತರ ಜಮೀನಿಗೆ ಹಣ ಬಿಡುಗಡೆ ಮಾಡಿದಲ್ಲಿ ಆರ್ಟಿಸಿ ಜೊತೆ ಆಧಾರ್ ಲಿಂಕ್ ಆಗಿದ್ದಲ್ಲಿ ಈ ಪರಿಹಾರ ಹಣ ನೇರವಾಗಿ ರೈತರ ಖಾತೆಗೆ ಜಮೆ ಮಾಡಲು ಸಹಾಯಕವಾಗುತ್ತದೆ.

ಇದನ್ನೂ ಓದಿ : ನಿಮ್ಮ ಆಧಾರ್ ಕಾರ್ಡ್ ಹೀಗೆ ತಕ್ಷಣ ಡೌನ್ಲೋಡ್ ಮಾಡಿರಿ : Aadhaar card download

RTC Aadhaar Card link ಮಾಡುವ ವಿಧಾನ :

ನಿಮ್ಮ ಆರ್ಟಿಸಿ ಜೊತೆ ಆಧಾರ್ ಲಿಂಕ್ ಮಾಡಿಸಲು ಸರ್ಕಾರದ ಭೂಮಿ ಮತ್ತು ನಾಗರಿಕ ಸೇವೆಗಳ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ನೇರ ಲಿಂಕ್ ಕೊನೆಯಲ್ಲಿ ನೀಡಲಾಗಿದೆ.

ನೀವು ಪಹಣಿಯಲ್ಲಿ ಲಿಂಕ್ ಮಾಡಲು ಬಯಸಿರುವ ವ್ಯಕ್ತಿಯ ಮೊಬೈಲ್ ಸಂಖ್ಯೆ ಹಾಗೂ ಕೊಟ್ಟಿರುವ Captcha ದಾಖಲಿಸಿ SEND OTP ಮೇಲೆ ಕ್ಲಿಕ್ ಮಾಡಿ.

RTC Aadhaar Card link login

ಈಗ OTP ದಾಖಲಿಸಿ Login ಮಾಡಿ.

ಈಗ ಮುಖಪುಟದಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಹೆಸರು ದಾಖಲಿಸಿ, ಮಾರ್ಕ್ ಟಿಕ್ ಮಾಡಿ Verify ಮಾಡಿ, ನಂತರ ಆಧಾರ್ ಪರಿಶೀಲನೆ ಬಳಸಿ ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿ ಆಯ್ಕೆ ಕ್ಲಿಕ್ ಮಾಡಿ.

aadhaar verify or rtc link

ನಂತರ ನಿಮ್ಮ ಆಧಾರ್ ನಮೂದಿಸಿ ಟಿಕ್ ಮಾರ್ಕ್ ಆಯ್ಕೆ ಮಾಡಿ ಮತ್ತೆ ಆಧಾರ್ OTP ಪಡೆದು ಅದನ್ನು ದಾಖಲಿಸಿ.

ಆಧಾರ್ ಹಾಗೂ ಪಹಣಿ ಲಿಂಕ್ ಮಾಡಲು ಆಧಾರ್ ಲಾಗಿನ್

ಈಗ ನಿಮ್ಮ ಮುಂದೆ ನಿಮ್ಮ ಮುಖಪುಟ ಇರಲಿದ್ದು, ಇಲ್ಲಿ ನೀವು ಈಗಾಗಲೇ ಲಿಂಕ್ ಮಾಡಿದ್ದರೆ ಆ ಪಹಣಿಯ ವಿವರ ಇರುತ್ತದೆ, ನೀವು ಹೊಸದಾಗಿ ಲಿಂಕ್ ಮಾಡಿಸಲು, Link Aadhaar/ ಲಿಂಕ್ ಆಧಾರ್ ಆಯ್ಕೆ ಮೇಲೆ ಕ್ಲಿಕ್ ಮಾಡಿ,

Link aadhaar

ಈಗ ನಿಮಗೆ ನಿಮ್ಮ ಆಧಾರ್ ಗೆ ಲಿಂಕ್ ಆಗಬೇಕಿರುವ ಜಾಗದ ವಿವರ ತೋರಿಸುತ್ತದೆ, ಅದರ ಮುಂದೆ ಇರುವ ಮಾರ್ಕ್ ಆಯ್ಕೆ ಮಾಡಿ ಕೊನೆಯಲ್ಲಿರುವ link ಆಯ್ಕೆ ಮೇಲೆ ಕ್ಲಿಕ್ ಮಾಡಿ, ಒಂದು ವೇಳೆ ನಿಮ್ಮ ಪಹಣಿ ವಿವರ ತೋರಿಸದಿದ್ದಲ್ಲಿ, ಕೆಳಗಿರುವ Fetch details ಆಯ್ಕೆ ಮಾಡಿ, ಕೆಳಗೆ ನಿಮ್ಮ ಭೂಮಿ ವಿವರ ದಾಖಲಿಸಿ, ನಿಮ್ಮ ಆರ್ಟಿಸಿ Search ಮಾಡಿ, ನಂತರ ಅದರ ಮುಂದಿರುವ Link ಆಯ್ಕೆ ಮೇಲೆ ಕ್ಲಿಕ್ ಮಾಡಿ.

Link your TC to aadhaar number

ಲಿಂಕ್ ಗಾಗಿ ಇನ್ನೊಮ್ಮೆ OTP ಪಡೆದು ದಾಖಲಿಸಿ, ಈಗ ನಿಮ್ಮ ಪಹಣಿಯನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲಾಗಿದೆ. ಎನ್ನುವ ಸಂದೇಶ ತೋರಿಸುತ್ತದೆ, ಇದೇ ರೀತಿಯಾಗಿ ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಪಹಣಿ ಇದ್ದರೆ ಅದನ್ನು ಪುನಃ Link Aadhaar/ ಲಿಂಕ್ ಆಧಾರ್ ಆಯ್ಕೆಗೆ ಹೋಗಿ ನಿಮ್ಮ ಜಾಗದ ವಿವರ Search ಮಾಡಿ ಅದನ್ನೂ ಲಿಂಕ್ ಮಾಡಬೇಕು.

ನಿಮ್ಮ ಪಹಣಿಯನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲಾಗಿದೆ, your RTC is linked with the aadhaar

ಈ ರೀತಿಯಾಗಿ ನೀವು ಸುಲಭವಾಗಿ ನಿಮ್ಮ ಪಹಣಿ ಜೊತೆ ನಿಮ್ಮ ಆಧಾರ್ ಲಿಂಕ್ (RTC Aadhaar Card link) ಮಾಡಬಹುದು.

RTC Aadhaar Card link ಮಾಡಲು ಲಿಂಕ್ ಇಲ್ಲಿದೆ : CLICK HERE

ಒಂದು ವೇಳೆ ನಿಮ್ಮ ಆಧಾರ್ ನಲ್ಲಿರುವ ಹೆಸರು ಹಾಗೂ ಪಹಣಿಯಲ್ಲಿರುವ ಹೆಸರು ಬೇರೆ ಬೇರೆ ಇದ್ದಲ್ಲಿ ನೀವು ಲಿಂಕ್ ಮಾಡಲು ಸಾಧ್ಯವಾಗುವುದಿಲ್ಲ, ಆಗ ನೀವು ನಿಮ್ಮ ಗ್ರಾಮದ ಗ್ರಾಮ ಲೆಕ್ಕಿಗ (Villlage Accountant) ಬಳಿ ನಿಮ್ಮ ಆಧಾರ್ ಹಾಗೂ ಪಹಣಿ ನೀಡಿ ಲಿಂಕ್ ಮಾಡಿಸಿಕೊಳ್ಳಬೇಕು, ಜೊತೆಗೆ ಆಧಾರ್ ಲಿಂಕ್ ಇರುವ ಮೊಬೈಲ್ ಕೂಡ ತೆಗೆದುಕೊಂಡು ಹೋಗಬೇಕು.

ಕೊಟ್ಟಿರುವ ಮಾಹಿತಿ ಉಪಯುಕ್ತವಾಗಿದ್ದಲ್ಲಿ ಇತರರಿಗೂ ಶೇರ್ ಮಾಡಿ, ಇತರರಿಗೂ ಸಹಾಯವಾಗಲಿ. ಹಾಗೂ ಇದೇ ರೀತಿಯ ಇನ್ನಷ್ಟು ಉಪಯುಕ್ತ ಮಾಹಿತಿಯನ್ನು ತಕ್ಷಣ ಪಡೆಯಲು ನಮ್ಮ ವಾಟ್ಸಪ್ ಅಥವಾ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ.

ಇದನ್ನೂ ಓದಿ :

120 ಕಿಮೀ ಮೈಲೇಜ್ ನೀಡುವ 95 ಸಾವಿರ ಬೆಲೆಯ ಮೊದಲ ಸಿಎನ್‌ಜಿ ಬೈಕ್ ಬಿಡುಗಡೆ

ಈ ಯೋಜನೆಯಲ್ಲಿ ರೂ.15,000 ಟೂಲ್ ಕಿಟ್, 3 ಲಕ್ಷ ಸಹಾಯಧನ ಪಡೆಯಿರಿ


Share this page
WhatsApp Group Join Now
Telegram Group Join Now

6 thoughts on “RTC Aadhaar Card link ಕಡ್ಡಾಯ, ಮೊಬೈಲ್ ನಲ್ಲಿ 2 ನಿಮಿಷದಲ್ಲಿ ಆರ್ಟಿಸಿಗೆ ಆಧಾರ್ ಲಿಂಕ್ ಮಾಡುವ ವಿಧಾನ ಇಲ್ಲಿದೆ.”

Leave a Comment