ಗುಡ್ ನ್ಯೂಸ್: ಇನ್ಮುಂದೆ ಖಾಸಗಿ ಕಂಪೆನಿಗಳಲ್ಲಿ 75% ಕನ್ನಡಿಗರಿಗೆ ಉದ್ಯೋಗ ಮೀಸಲು!

Share this page

ಕನ್ನಡಿಗರಿಗೆ ಉದ್ಯೋಗ ಮೀಸಲು: ಹೌದು, ಕರ್ನಾಟಕದ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗವನ್ನು ಮೀಸಲಿಡುವ ವಿಧೇಕವನು ರಾಜ್ಯ ಸರ್ಕಾರವು ಮಂಡಿಸಿದ್ದು, ಇದಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ

WhatsApp Group Join Now
Telegram Group Join Now

ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು

ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಕಲ್ಪಿಸುವ ವಿಧೇಯಕಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು, ಈ ವಿಧೇಯಕದಿಂದ ಖಾಸಗಿ ವಲಯದ ಕಂಪೆನಿಗಳಲ್ಲಿ ಶೇ. 50 ರಷ್ಟು ಮ್ಯಾನೇಜ್ ಮೆಂಟ್ ಸೀಟುಗಳು, ಹಾಗೂ ಶೇ. 75 ರಷ್ಟು ನಾನ್ ಮ್ಯಾನೇಜ್ ಮೆನ್ಟ್ ಹುದ್ದೆಗಳಲ್ಲಿ ಕಂಪನಿಯು ಕಡ್ಡಾಯವಾಗಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕು, ಹಾಗೂ ಗ್ರೂಪ್ ಸಿ. ಹಾಗೂ ಡಿ. ಹುದ್ದೆಗಳಲ್ಲಿ 100% ಕನ್ನಡಿಗರೇ ಇರಬೇಕು.

ಈ ಮೂಲಕ ಕರ್ನಾಟಕದಲ್ಲಿರುವ ಎಲ್ಲಾ ಖಾಸಗಿ ವಲಯದ ಕಂಪನಿಗಳು ಈ ಮೀಸಲಾತಿ ನಿಯಮದಂತೆ ಕನ್ನಡಿಗರಿಗೆ ಕಡ್ಡಾಯವಾಗಿ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕಾಗಿರುತ್ತದೆ, ಇದರಿಂದ ಕನ್ನಡದ ಜನರಿಗೆ ಕಂಪನಿಗಳಲ್ಲಿ ಹೆಚ್ಚು ಉದ್ಯೋಗ ಸಿಗುವ ಅವಕಾಶವಿದೆ.

ಕರ್ನಾಟಕದಲ್ಲಿ ಹುಟ್ಟಿದ ಅಥವಾ ಕನಿಷ್ಟ 15 ವರ್ಷದಿಂದ ಕರ್ನಾಟಕದಲ್ಲಿ ವಾಸಿಸುತ್ತಿರುವ ಕನ್ನಡ ಮಾತನಾಡಲು, ಓದಲು, ಬರೆಯಲು ಬರುವ ಕರ್ನಾಟಕದ ನಿವಾಸಿಗಳು ಈ ಮೀಸಲಾತಿಗೆ ಒಳಪಟ್ಟಿರುತ್ತಾರೆ.

ಈ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿಧೇಕ ಮಂಡಿಸಿದ್ದು, ಇದಕ್ಕೆ ಅನುಮೋದನೆ ಸಿಕ್ಕಿದೆ, ಈ ಬಗ್ಗೆ ಸಂತೋಷ್ ಲಾಡ್ ಹಾಗೂ ಸಿಎಂ ಸಿದ್ದರಾಮಯ್ಯ ಅಧಿಕೃತ x ಖಾತೆಯಲ್ಲಿ ಹಂಚಿಕೊಂಡಿದ್ದಾರೆ

ಈ ಮೂಲಕ ಕನ್ನಡಿಗರಿಗೆ ಕನ್ನಡದ ನೆಲದಲ್ಲಿ ಹೆಚ್ಚು ಉದ್ಯೋಗ ಅವಕಾಶ ದೊರಕಲಿದ್ದು, ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ, ನಮ್ಮದು ಕನ್ನಡ ಪರವಾದ ಸರ್ಕಾರ ಕನ್ನಡಿಗರ ಹಿತ ಕಾಪಾಡುವುದು ನಮ್ಮ ಆದ್ಯತೆಯಾಗಿದೆ ಏನು ಮುಖ್ಯಮಂತ್ರಿಗಳ x ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ :

10ನೇ ತರಗತಿ ಪಾಸಾದವರಿಗೆ ಪೋಸ್ಟ್ ಆಫೀಸ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ – Post Office Jobs

ನಿಮಗೆ ಬಂದಿರುವ ಅನ್ನಭಾಗ್ಯ ಹಣವನ್ನು ಇಲ್ಲಿ ಚೆಕ್ ಮಾಡಿ|annabhagya DBT amount check


Share this page
WhatsApp Group Join Now
Telegram Group Join Now

Leave a Comment