ರೇಷನ್ ಕಾರ್ಡ್ ತಿದ್ದುಪಡಿಗೆ ಆ.10 ರವರೆಗೆ ಅವಕಾಶ, ಇಲ್ಲಿದೆ ಡೈರೆಕ್ಟ್ ಲಿಂಕ್

Share this page

ಸ್ನೇಹಿತರೇ, ರಾಜ್ಯ ಆಹಾರ ಇಲಾಖೆಯು ಈಗಾಗಲೇ ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಹೊಸ ಸದಸ್ಯರ ಸೇರ್ಪಡೆಗೆ ಅವಕಾಶ ನೀಡಿದ್ದು, ನೀವು ತಿದ್ದುಪಡಿ ಹಾಗೂ ಸೇರ್ಪಡೆ ಮಾಡಲು ಆಗಸ್ಟ್ 10 ರ ತನಕ ಕಾಲಾವಕಾಶವಿದೆ, ನೀವು ಮಾಡಿಸಲು ಯಾವ ದಾಖಲೆ ಹೊಂದಿರಬೇಕು, ತಿದ್ದುಪಡಿ ಹೇಗೆ ಮಾಡುವುದು ಇಲ್ಲಿದೆ ವಿವರ.

WhatsApp Group Join Now
Telegram Group Join Now

ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ :

ರೇಷನ್ ಕಾರ್ಡ್ ತಿದ್ದುಪಡಿಗೆ ಆ.10 ರವರೆಗೆ ಅವಕಾಶ, ಇಲ್ಲಿದೆ ಡೈರೆಕ್ಟ್ ಲಿಂಕ್
ಪಡಿತರ ಚೀಟಿ ತಿದ್ದುಪಡಿ

ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ರಾಜ್ಯದ ಪಡಿತರಚೀಟಿಯಲ್ಲಿನ ತಿದ್ದುಪಡಿ ಹಾಗೂ ಕುಟುಂಬದಲ್ಲಿ ಹೊಸ ಸೇರ್ಪಡೆಗೆ ಅವಕಾಶ ನೀಡಿದ್ದು, ನೀವು ಈಗ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ಒಳಗಾಗಿ ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ.

ಸರ್ಕಾರವು ಈ ಬಾರಿ ಹೆಚ್ಚಿನ ಅವಧಿ ನೀಡಿದ್ದು, ನೀವು ಆಗಸ್ಟ್ 10 ರ ಸಂಜೆ 5 ಘಂಟೆ ಒಳಗಾಗಿ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವಿರುತ್ತದೆ, ನಿಮ್ಮ ಬಿಪಿಎಲ್ (BPL), ಅಂತ್ಯೋದಯ (AAY), ಎಪಿಎಲ್ (APL) ಕಾರ್ಡಿನಲ್ಲಿ ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಹೊಸ ಸದಸ್ಯರ ಸೇರ್ಪಡೆ, ಸದಸ್ಯರ ಹೆಸರು ತೆಗೆಯಲು ಅವಕಾಶ ನೀಡಲಾಗಿದೆ.

ತಿದ್ದುಪಡಿಗೆ ಹಾಗೂ ಹೊಸ ಸದಸ್ಯರ ಸೇರ್ಪಡೆಗೆ ಬೇಕಾಗುವ ದಾಖಲೆಗಳು :

ನೀವು ಪಡಿತರ ಚೀಟಿ ತಿದ್ದುಪಡಿ ಅಥವಾ ಹೊಸ ಸದಸ್ಯರ ಸೇರ್ಪಡೆಗೆ ಈಗಾಗಲೇ ರೇಷನ್ ಕಾರ್ಡ್ನಲ್ಲಿರುವ ಯಾವುದಾರೂ ಒಬ್ಬ ಸದಸ್ಯ ಹಾಗೂ ಅವರ ಮೊಬೈಲ್ ಜೊತೆಯಲ್ಲಿರಬೇಕು ಹಾಗೂ ಈ ಕೆಳಗಿನ ದಾಖಲೆಗಳು ಬೇಕಾಗಿರುತ್ತದೆ.

  • ವಿಳಾಸ ಬದಲಾವಣೆಗೆ ಆಧಾರ್ ಪ್ರತಿ
  • ಹೊಸ ಸೇರ್ಪಡೆ ಆದಾಯ ಹಾಗೂ ಜಾತಿ ಪ್ರಮಾಣ ಪತ್ರ
  • ಮೊಬೈಲ್ ಸಂಖ್ಯೆ
  • ರೇಷನ್ ಕಾರ್ಡ್ ಸಂಖ್ಯೆ

ತಿದ್ದುಪಡಿ ಮಾಡುವ ವಿಧಾನ ಹೇಗೆ?

ನೀವು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ನಿಮ್ಮ ಹತ್ತಿರ ಗ್ರಾಮ ಒನ್, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಮೇಲಿನ ದಾಖಲೆಗಳೊಂದಿಗೆ ತೆರಳಿ ನಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾದಿಸಿಕೊಳ್ಳಬಹುದಾಗಿದೆ.

ಬಾಕಿ ಇರುವ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ, ಸಿಎಂ ಸಿದ್ದರಾಮಯ್ಯ

ಸ್ವಯಂ ಉದ್ಯೋಗ ಮಾಡುವವರಿಗೆ 2ಲಕ್ಷ ರೂ. ಸಬ್ಸಿಡಿ ಸಾಲ ಸೌಲಭ್ಯ, ಇಲ್ಲದೆ ಅರ್ಜಿ ವಿಧಾನ Devaraj Urs subsidy loan scheme

ಅನ್ನಭಾಗ್ಯ ಯೋಜನೆಯ ಜುಲೈ ತಿಂಗಳ ಹಣ ಬಿಡುಗಡೆ|Annabhagya July amount credited


Share this page
WhatsApp Group Join Now
Telegram Group Join Now

1 thought on “ರೇಷನ್ ಕಾರ್ಡ್ ತಿದ್ದುಪಡಿಗೆ ಆ.10 ರವರೆಗೆ ಅವಕಾಶ, ಇಲ್ಲಿದೆ ಡೈರೆಕ್ಟ್ ಲಿಂಕ್”

Leave a Comment