ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಸೇರ್ಪಡೆಗೆ ಅವಕಾಶ, ಮುಗಿಯದ ಸರ್ವರ್ ಸಮಸ್ಯೆ !

Share this page

ಕರ್ನಾಟಕ ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಇದೀಗ ಮತ್ತೆ ಜನಸಾಮಾನ್ಯರಿಗೆ ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಸೇರ್ಪಡೆಗೆ ಅವಕಾಶ ನೀಡಿದ್ದು, ಆದರೆ ಮೊದಲಿನಂತೆ ಸರ್ವರ್ ಸಮಸ್ಯೆ ಮುಂದುವರಿದಿದೆ.

WhatsApp Group Join Now
Telegram Group Join Now

ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಸೇರ್ಪಡೆಗೆ ಅವಕಾಶ :

ಹೌದು, ರಾಜ್ಯ ಸರಕಾರದ ಆಹಾರ ಇಲಾಖೆಯು ಈಗ ಮತ್ತೆ ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಹೊಸ ಸೇರ್ಪಡೆಗೆ ಅವಕಾಶ ನೀಡಿದೆ, ಈ ಬಾರಿಯ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಬಳಿಕ ಕಾರ್ಡ್ ನಲ್ಲಿರುವ ತಪ್ಪುಗಳನ್ನು ಸರಿಪಡಿಸಲು ರಾಜ್ಯದಲ್ಲಿ ಕಾರ್ಡ್ ತಿದ್ದುಪಡಿ ಹಾಗೂ ಸೇರ್ಪಡೆಗೆ ಜನ ಮುಗಿಬೀಳುತ್ತಿದ್ದು, ಸರ್ಕಾರವು ಕೆಲವೇ ದಿನಗಳು ಮಾತ್ರ ಅವಕಾಶ ನೀಡಿತ್ತು, ಬಳಿಕ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತ್ತೆ ಸ್ಥಗಿತಗೊಳಿಸಿದ್ದು, ಈಗ ಮತ್ತೆ ಆರಂಭಿದ್ದು ಈ ತಿಂಗಳಾಂತ್ಯದವರೆಗೆ ಅವಕಾಶ ನೀಡುವ ಸಾದ್ಯತೆ ಇದೆ.

ನಿಮಗೆ ಬಂದಿರುವ ಅನ್ನಭಾಗ್ಯ ಹಣವನ್ನು ಇಲ್ಲಿ ಚೆಕ್ ಮಾಡಿ|annabhagya DBT amount check

ತಿದ್ದುಪಡಿಗೆ ಅವಕಾಶ ಆದರೆ ಮುಗಿಯದ ಸರ್ವರ್ ಸಮಸ್ಯೆ!

ಸರ್ಕಾರವು ಈ ಹಿಂದೆ ಕೂಡ ತಿದ್ದುಪಡಿಗೆ ಅವಕಾಶ ನೀಡಿದ ಸಂದರ್ಭದಲ್ಲಿ ಹೆಚ್ಚಿನವರು ಸರ್ವರ್ ಸಮಸ್ಯೆಯಿಂದ ತಿದ್ದುಪಡಿ ಮಾಡಲಾಗದೇ ಸೇವಾ ಕೇಂದ್ರದ ಮುಂದೆ ದಿನವಿಡೀ ಕೂರುವಂತಾಗಿತ್ತು, ಈಗ ಮತ್ತೆ ತಿದ್ದುಪಡಿ ಹಾಗೂ ಹೊಸ ಸದಸ್ಯರ ಸೇರ್ಪಡೆಗೆ ಅವಕಾಶ ನೀಡಿದ್ದರೂ ಸಹ ಮತ್ತೆ ಅದೇ ಸರ್ವರ್ ಸಮಸ್ಯೆಯಿಂದ ಕಾಯಬೇಕಾಗಿದೆ.

ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ, ತಿದ್ದುಪಡಿ ಅನಿವಾರ್ಯ :

ಸರಕಾರವು ಈ ಬಾರಿ ಜಾರಿಗೊಳಿಸಿದ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಕೆಲವರಿಗೆ ಬರುತ್ತಿಲ್ಲ ಕಾರಣ ಮುಖ್ಯವಾಗಿ ರೇಷನ್ ಕಾರ್ಡ್ ನಲ್ಲಿರುವ ತಪ್ಪುಗಳು, ಈ ತಪ್ಪುಗಳನ್ನು ಸರಿಪಡಿಸಲು ಈಗ ಕಾರ್ಡ್ ತಿದ್ದುಪಡಿ ಅನಿವಾರ್ಯವಾಗಿದೆ.

ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ DBT ಮುಖಾಂತರ ನೇರವಾಗಿ ನಿಮ್ಮ ಖಾತೆಗೆ ಜಮೆಯಾಗಲಿದ್ದು, ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಹೆಸರು, ವಿಳಾಸ ಹಾಗೂ ನಿಮ್ಮ ಆಧಾರ ಕಾರ್ಡ್ ನಲ್ಲಿ ವಿವರ ಹೊಂದಾಣಿಕೆಯಿಲ್ಲದಿದ್ದಲ್ಲಿ ನಿಮಗೆ ಹಣ ಬರುವುದಿಲ್ಲ, ಆದ್ದರಿಂದ ನೀವು ರೇಷನ್ ಕಾರ್ಡ್ ನಲ್ಲಿ ನಿಮ್ಮ ತಪ್ಪು ಸರಿಪಡಿಸಿಕೊಳ್ಳಬೇಕು.

ಇನ್ನು ಗೃಹಲಕ್ಷ್ಮಿ ಯೋಜನೆಯಲ್ಲಿ ಕಾರ್ಡಿನಲ್ಲಿರುವ ಮುಖ್ಯ ಮಹಿಳಾ ಸದಸ್ಯೆಗೆ ಯೋಜನೆಯ ಹಣ ಬರಲಿದ್ದು, ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಮುಖ್ಯ ಸದಸ್ಯರು ಪುರುಷರಿದ್ದಲ್ಲಿ ನೀವು ನಿಮ್ಮ ರೇಷನ್ ಕಾರ್ಡ್ ಸದಸ್ಯನ ಬದಲಾವಣೆ ಮಾಡಬೇಕು.

ಇದಲ್ಲದೇ ಹೊಸ ಸದಸ್ಯರ ಸೇರ್ಪಡೆ, ಹೆಸರು ವಿಳಾಸ ಬದಲಾವಣೆ ಇವೆಲ್ಲವೂ ಮಾಡಿಸಬೇಕಾದರೆ ತಿದ್ದುಪಡಿ ಅವಕಾಶ ನೀಡಿದ ಸಂದರ್ಭದಲ್ಲಿ ಮಾತ್ರ ಸಾಧ್ಯವಿದ್ದು, ಈಗ ಈ ಯೋಜನೆ ಬಳಿಕ ತಿದ್ದುಪಡಿಯ ಬೇಡಿಕೆ ಹೆಚ್ಚಾಗಿದ್ದು, ಅಲ್ಪ ಸಮಯದ ಕಾರಣ ಸರ್ವರ್ ಕೂಡ ಕೈಕೊಡುತ್ತಿದೆ.

ಸದ್ಯ ರಾಜ್ಯ ಸರ್ಕಾರವು ಗ್ರಾಮ ಒನ್ , ಕರ್ನಾಟಕ ಒನ್ ಸೇವಾಕೇಂದ್ರಗಲ್ಲಿ ಮಾತ್ರ ತಿದ್ದುಪಡಿ ಹಾಗೂ ಹೊಸ ಸೇರ್ಪಡೆಗೆ ಅವಕಾಶ ನೀಡಿದ್ದು, ನೀವು ತಿದ್ದುಪಡಿ ಮಾಡಿಸುವುದು ಇದ್ದಲ್ಲಿ ನಿಮ್ಮ ಹತ್ತಿರದ ಗ್ರಾಮ ಒನ್ ಸೇವಾ ಕೇಂದ್ರಗಳಲ್ಲಿ ವಿಚಾರಿಸಿ, ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ, ಹೊಸ ರೇಶನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಸದ್ಯ ಸ್ತಗಿತಗೊಲಿಸಲಾಗಿದ್ದು, ಕೆಲವೇ ದಿನಗಳಲ್ಲಿ ಮತ್ತೆ ಅವಕಾಶ ನೀಡುವ ನಿರೀಕ್ಷೆ ಇದೆ.

ನಿಮ್ಮ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಆಗಲಿದೆ? ಸರ್ಕಾರದ ಖಡಕ್ ನಿರ್ಧಾರ | BPL Card Cancellation

ಪಿಎಂ ಕಿಸಾನ್ ಯೋಜನೆಯಲ್ಲಿ 6,000 ರೂ. ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ: PM Kisan Samman Nidhi Scheme


Share this page
WhatsApp Group Join Now
Telegram Group Join Now

2 thoughts on “ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಸೇರ್ಪಡೆಗೆ ಅವಕಾಶ, ಮುಗಿಯದ ಸರ್ವರ್ ಸಮಸ್ಯೆ !”

Leave a Comment