10ನೇ ತರಗತಿ ಪಾಸಾದವರಿಗೆ ಪೋಸ್ಟ್ ಆಫೀಸ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ – Post Office Jobs

Share this page

Post Office Jobs : ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಬ್ರಾಂಚ್ ಪೋಸ್ಟ್ ಮಾಸ್ಟರ್ (BPM), ಅಸಿಸ್ಟೆಂಟ್ ಪೋಸ್ಟ್ ಮಾಸ್ಟರ್ (ABPM) ಹಾಗೂ ಪೋಸ್ಟ್ ಮ್ಯಾನ್ ಹುದ್ದೆ (Dak Sevak) ಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಖಾಲಿ ಇರುವ ಹುದ್ದೆಗಳ ವಿವರ, ಅರ್ಜಿ ವಿಧಾನ ಈ ಕೆಳಗೆ ವಿವರಿಸಲಾಗಿದೆ.

WhatsApp Group Join Now
Telegram Group Join Now

ಕರ್ನಾಟಕದಲ್ಲಿ ಒಟ್ಟು 1,940 ಖಾಲಿ ಇರುವ ಹುದ್ದೆಗಳು (Post Office Jobs) :

ಭಾರತೀಯ ಅಂಚೆ ಇಲಾಖೆಯು ಖಾಲಿ ಇರುವ ಬ್ರಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟೆಂಟ್ ಪೋಸ್ಟ್ ಮಾಸ್ಟರ್, ಡಾಖಾ ಸೇವಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಎಲ್ಲಾ ರಾಜ್ಯದ ಒಟ್ಟು 44,228 ಖಾಲಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಕರ್ನಾಟಕದಲ್ಲಿ ಒಟ್ಟು 1,940 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

10ನೇ ತರಗತಿ ಪಾಸಾದವರಿಗೆ ಪೋಸ್ಟ್ ಆಫೀಸ್ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ - Post Office Jobs
Post Office Jobs

ಅರ್ಜಿ ದಿನಾಂಕ :

ಈ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು 15/07/2024 ರಿಂದ 05/08/2024 ತನಕ ಕಾಲಾವಕಾಶವಿದೆ.

ತಿದ್ದುಪಡಿಗೆ 06/08/2024 ರಿಂದ 08/08/2024 ತನಕ ಕಾಲಾವಾಕಾಶವಿದೆ.

ಸಂಬಳ:

BPM ಬ್ರಾಂಚ್ ಪೋಸ್ಟ್ ಮಾಸ್ಟರ್ ಗೆ ರೂ. 12,000 ದಿಂದ ರೂ. 29,380 ಇರುತ್ತದೆ.

ABPM/Dak Sevaks ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಹಾಗೂ ಪೋಸ್ಟ್ ಮ್ಯಾನ್ ಹುದ್ದೆಗಳಿಗೆ ರೂ. 10,000 ದಿಂದ 24,470 ಆಗಿರುತ್ತದೆ.

ವಯೋಮಿತಿ ಅರ್ಹತೆ :

ಅರ್ಜಿ ಸಲ್ಲಿಸಲು 18 ವರ್ಷದ ಮೇಲ್ಪಟ್ಟು, 40ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ.

ಇನ್ನು SC/ST ಯವರಿಗೆ 5 ವರ್ಷ, OBC – 3 ವರ್ಷ, ಅಂಗವಿಕಲರಿಗೆ 10 ರಿಂದ 15 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ವಿದ್ಯಾರ್ಹತೆ:

ಭಾರತದ ಯಾವುದೇ ಅಧಿಕೃತ ಶಿಕ್ಷಣ ಸಂಸ್ಥೆಯಿಂದ 10 ನೇ ತರಗತಿ ಪಾಸಾದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ, ಇನ್ನು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ಅರ್ಜಿ ಶುಲ್ಕ:

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಅರ್ಜಿ ಶುಲ್ಕ ರೂ. 100 ಪಾವತಿಸಬೇಕು, ಮಹಿಳಾ ಅರ್ಜಿದಾರರು, SC,ST, ಅಂಗವಿಕಲರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ :

ಈ ಮೇಲಿನ ಹುದ್ದೆಗಳಿಗಾಗಿ ಅರ್ಜಿಯನ್ನು ನೀವು ಆನ್ಲೈನ್ ನಲ್ಲಿ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಸಲ್ಲಿಸಬಹುದಾಗಿದೆ, ಅರ್ಜಿಯ ಸಮಯದಲ್ಲಿ ಕೆಳಗೆ ನೀಡಿರುವ ದಾಖಲೆಗಳು ಇರಬೇಕು

(Post Office Jobs) ಬೇಕಾಗುವ ದಾಖಲೆಗಳು:

  • ಇತ್ತೀಚಿನ ಭಾವಚಿತ್ರ
  • ಅಂಕಪಟ್ಟಿ
  • ನಿಮ್ಮ ಯಾವುದಾದರೂ ಅಧಿಕೃತ ಗುರುತಿನ ಚೀಟಿ
  • ಜಾತಿ ಪ್ರಮಾಣ ಪತ್ರ
  • ಅಂಗವಿಕಲರಾಗಿದ್ದಲ್ಲಿ ಅದರ ದೃಡೀಕರಣ ಪ್ರತಿ
  • ಜನ್ಮ ದಿನಾಂಕದ ದಾಖಲೆ

ಇನ್ನು ನೀವು ವಿವರವಾಗಿ ತಿಳಿಯಲು, ನೋಟಿಫಿಕೇಶನ್ ಪಿಡಿಎಫ್ ಫೈಲ್ ಕೂಡ ಇದ್ದು, ಇಲ್ಲಿ ನಿಮಗೆ ಎಲ್ಲಾ ವಿವರ ಹಾಗೂ ಅರ್ಜಿ ವಿವರವನ್ನು ವಿವರವಾಗಿ ತಿಳಿಸಲಾಗಿದೆ, ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಕೂಡ ಅಧಿಕೃತ ಅಂಚೆ ಇಲಾಖೆಯ ವೆಬ್ಸೈಟ್ ನಲ್ಲಿ ಸಿಗಲಿದೆ.

Notification & Registion Link : CLICK HERE

ಇದನ್ನೂ ಓದಿ :

ಉಡುಪಿ ಜಿಲ್ಲೆಯಲ್ಲಿ ಕಿರಿಯ ಆರೋಗ್ಯ ಸಹಾಯಕರ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ವಿವರ | Junior health Assistant Posts

ನಿಮಗೆ ಅನ್ನಭಾಗ್ಯ ಹಣ ಬರುತ್ತಿಲ್ಲವೇ? ಹಾಗಾದರೆ ತಕ್ಷಣ ಈ ಕೆಲಸ ಮಾಡಿ : annabhagya amount not recived

ಕಾರ್ಮಿಕರ ಮಕ್ಕಳಿಗೆ ರೂ.25,000 ರವರೆಗೆ ಸ್ಕಾಲರ್ಷಿಪ್ ಪಡೆಯಲು ಅರ್ಜಿ ಸಲ್ಲಿಸಿ: NSP Scholarship 2024

ಮಣಿಪಾಲ ಆರೋಗ್ಯಕಾರ್ಡ್ ನೋಂದಣಿ ಆರಂಭ, ಇಲ್ಲಿದೆ ಶುಲ್ಕ ಹಾಗೂ ಅರ್ಜಿ ವಿವರ : Manipal Arogya Card 2024


Share this page
WhatsApp Group Join Now
Telegram Group Join Now

3 thoughts on “10ನೇ ತರಗತಿ ಪಾಸಾದವರಿಗೆ ಪೋಸ್ಟ್ ಆಫೀಸ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ – Post Office Jobs”

Leave a Comment