ಕರ್ನಾಟಕ ಲೋಕಸೇವಾ ಆಯೋಗವು 2023-24ನೇ ಸಾಲಿನ ಗ್ರೂಪ್-ಸಿ ವೃಂದದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಪಂಚಾಯತಿ ಅಭಿವೃದ್ದಿ ಅಧಿಕಾರಿ (PDO ಹುದ್ದೆ) ಒಟ್ಟು 247 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಅರ್ಜಿಯ ವಿವರ ಈ ಕೆಳಗೆ ನೀಡಲಾಗಿದೆ.

247 PDO ಹುದ್ದೆಗಳಿಗೆ ಅರ್ಜಿ ಆಹ್ವಾನ :
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಖಾಲಿ ಇರುವ (PDO) ಪಂಚಾಯತ್ ಅಭಿವೃದ್ದಿ ಅಧಿಕಾರಿ ಹುದ್ದೆಗೆ ಅರ್ಜಿ ಕರೆಯಲಾಗಿದ್ದು, ಇದರಲ್ಲಿ ಉಳಿಕೆ ಮೂಲ ವ್ರಂದದ 150 ಹುದ್ದೆಗಳು ಹಾಗೂ ಹೈದರಾಬಾದ್ ಕರ್ನಾಟಕ ಸ್ಥಳೀಯ ವೃಂದದ 97 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ವಯೋಮಿತಿ:
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕನಿಷ್ಟ 18 ವರ್ಷವಾಗಿರಬೇಕು, ಇನ್ನು ಗರಿಷ್ಟ ವಯಸ್ಸು ಸಾಮಾನ್ಯ ವರ್ಗದವರಿಗೆ ಗರಿಷ್ಟ 38 ವರ್ಷಗಳು, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ದವರಿಗೆ ಗರಿಷ್ಟ 41 ವರ್ಷಗಳು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ / ಪ್ರವರ್ಗ – 1 ಅಭ್ಯರ್ಥಿಗಳಿಗೆ ಗರಿಷ್ಟ 43 ವರ್ಷಗಳು ತಿದ್ದುಪಡಿ ಅಧಿಸೂಚನೆಯಲ್ಲಿ ನಿಗದಿ ಪಡಿಸಲಾಗಿದೆ.
ಈ ಹಿಂದೆ ತಾಂತ್ರಿಕ ಕಾರಣದಿಂದ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಸಾಧ್ಯವಾಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಮೇಲಿನ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ದಿನಾಂಕ 03-10-2024 ರ ಒಳಗಾಗಿ ಅರ್ಜಿಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪದವಿ ತೇರ್ಗಡೆ ಹೊಂದಿರಬೇಕು, ಶುಲ್ಕ ವಿವರ ಅರ್ಜಿಯ ವಿಧಾನ, ಹುದ್ದೆಯ ವಿವರ, ಪರೀಕ್ಷೆಯ ವಿಧಾನ ಪೂರ್ಣ ವಿವರಗಳಿಗಾಗಿ ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್ಸೈಟ್ ನ ಅಧಿಸೂಚನೆಯಲ್ಲಿ ಪಡೆಯಬಹುದಾಗಿದೆ, ಅರ್ಜಿಯನ್ನು ನಿಮ್ಮ ಹತ್ತಿರದ ಸೇವಾಕೆಂದ್ರಗಳಲ್ಲಿ ಸಲ್ಲಿಸಬಹುದಾಗಿದೆ.
ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್ಸೈಟ್: https://kpsc.kar.nic.in
ಇದನ್ನೂ ಓದಿ :
ನೀವು FRUITS/ FID ಹೊಂದಿದ್ದೀರಾ? ಕೃಷಿ ಸೌಲಭ್ಯ ಪಡೆಯಲು ಹೊಂದಿರಲೇಬೇಕು, ಇಲ್ಲಿದೆ ಫ್ರೂಟ್ಸ್ ಖಾತೆ ಪಡೆಯುವ ವಿಧಾನ
View RTC (Pahani) ನಿಮ್ಮ ಭೂಮಿಯ ಪಹಣಿಯನ್ನು ಮೊಬೈಲ್ ನಲ್ಲಿ ಪರಿಶೀಲಿಸಿ