ಇವರುಗಳ ಕೃಷಿ ಸಾಲ ಮನ್ನಾಕ್ಕೆ ಅಗತ್ಯ ಕ್ರಮ : ಸಚಿವ ಕೆ. ಏನ್ ರಾಜಣ್ಣ

Share this page

ರಾಜ್ಯದಲ್ಲಿ 2017 ಹಾಗೂ 2018 ರ ಅವಧಿಯಲ್ಲಿ ರಾಜ್ಯ ಸರ್ಕಾರವು ಕೃಷಿ ಸಾಲ ಮನ್ನಾ ಮಾಡಿದ್ದು, ಆ ಸಮಯದಲ್ಲಿ ಮನ್ನಾ ಆಗದೆ ಇರುವ ರೈತರ ಸಾಲ ಮನ್ನಾದ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೆ. ಏನ್ ರಾಜಣ್ಣ ತಿಳಿಸಿದ್ದಾರೆ.

WhatsApp Group Join Now
Telegram Group Join Now

38 ಲಕ್ಷ ರೈತರ ಸಾಲ ಮನ್ನಾ

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ನೀಡಲಾಗುತ್ತಿರುವ ಶೂನ್ಯ ಬಡ್ಡಿದರ ಕೃಷಿ ಸಾಲವನ್ನು 2017 ರಲ್ಲಿ 50,000 ಹಾಗೂ 2018 ರಲ್ಲಿ 1ಲಕ್ಷ ರೂ. ಮನ್ನಾ ಮಾಡಲಾಗಿತ್ತು, ಈ ಅವಧಿಯಲ್ಲಿ ಒಟ್ಟು ಸುಮಾರು 38 ಲಕ್ಷಕ್ಕೂ ಅಧಿಕ ರೈತರು ಈ ಸಾಲ ಮನ್ನಾ ಲಾಭ ಪಡೆದಿದ್ದರು.

ಆದರೆ ತಾಂತ್ರಿಕ ಕಾರಣದಿಂದಾಗಿ ಸುಮಾರು 31 ಸಾವಿರ ರೈತರಿಗೆ ಈ ಕೃಷಿ ಸಾಲ ಮನ್ನಾ ಆಗಿರಲಿಲ್ಲ, ಆದ್ದರಿಂದ ಅವರಿಗೆ ಸಿಗಬೇಕಾದ  ಹಣವನ್ನು ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾಪನೆ ಸಲ್ಲಿಸಲಾಗಿದೆ ಎಂದು ಸದನದಲ್ಲಿ ಸಚಿವ ಕೆ. ಏನ್ ರಾಜಣ್ಣ ತಿಳಿಸಿದ್ದಾರೆ.

ಪಿಎಂ ಕಿಸಾನ್ ಯೋಜನೆಯಲ್ಲಿ 6,000 ರೂ. ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ: PM Kisan Samman Nidhi Scheme

ಈ ಬಾರಿ ಶೂನ್ಯ ಬಡ್ಡಿದರದಲ್ಲಿ 25 ಸಾವಿರ ಕೋಟಿ ಕೃಷಿ ಸಾಲದ ನೀಡುವ ಗುರಿ

ಈ ಬಾರಿ 2024-25 ನೆ ಸಾಲಿನಲ್ಲಿ ಸುಮಾರು 36 ಲಕ್ಷ ರೈತರುಗಳಿಗೆ 25 ಸಾವಿರ ಕೋಟಿ ಶೂನ್ಯ ಬಡ್ಡಿರಹಿತ ಸಾಲ ವನ್ನು ಪ್ರಾಥಮಿಕ ಸಹಕಾರ ಸಂಘ ಹಾಗೂ ಡಿಸಿಸಿ ಬ್ಯಾಂಕುಗಳ ಮೂಲಕ ವಿತರಿಸುವ ಗುರಿ ಹೊಂದಿರುವುದಾಗಿ ಸಹಕಾರ ಸಚಿವ ಕೆ. ಏನ್ ರಾಜಣ್ಣ ತಿಳಿಸಿದ್ದಾರೆ.

ಇನ್ನು 2023-24ನೇ ಸಾಲಿನಲ್ಲಿ 29.26 ಲಕ್ಷ ರೈತರುಗಳಿಗೆ 22 ಸಾವಿರ ಕೋಟಿ ಬೆಳೆ ಸಾಲ ನೀಡಲಾಗಿದ್ದು, 2024-25ನೇಯ ಸಾಲಿನಲ್ಲಿ ಬೆಳೆ ಸಾಲದ ಜೊತೆಗೆ ಪಶು ಸಂಗೋಪನೆಗೆ ಬಂಡವಾಳ ಸಾಲವನ್ನೂ ಈ ಅವಧಿಯಲ್ಲಿ ಮಾದ್ಯಮ ಹಾಗೂ ದೀರ್ಘಾವಧಿ ಸಾಲ ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಕೃಷಿ ಪಂಪ್ ಸೆಟ್ ಗೆ ಆಧಾರ್ ಲಿಂಕ್ ಕಡ್ಡಾಯ, ಆದೇಶ ಹೊರಡಿಸಿದ ಇಂಧನ ಇಲಾಖೆ! Aadhaar and irrigation pumpset link

ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಸೇರ್ಪಡೆಗೆ ಅವಕಾಶ, ಮುಗಿಯದ ಸರ್ವರ್ ಸಮಸ್ಯೆ !


Share this page
WhatsApp Group Join Now
Telegram Group Join Now

Leave a Comment