ಈ ಯೋಜನೆಯಡಿಯಲ್ಲಿ ಮಕ್ಕಳಿಗೆ ಪ್ರತೀ ತಿಂಗಳು 4000ರೂ. ಸಿಗಲಿದೆ, ಯಾರು ಅರ್ಜಿ ಸಲ್ಲಿಸಬಹುದು ಇಲ್ಲಿದೆ ವಿವರ Financial assistance for children

Share this page

ಇತ್ತೀಚಿಗೆ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ಸಂದೇಶದಲ್ಲಿ ತಂದೆ ಇಲ್ಲದ ಮಕ್ಕಳಿಗೆ 24,000 ರೂ. ಸಹಾಯಧನ (Financial assistance for children) ನೀಡಲಾಗುತ್ತದೆ ಎಂದು ಫಾರ್ವರ್ಡ್ ಆಗುತ್ತಿದ್ದು, ಇದರ ಬಗ್ಗೆ ಈಗ ಸ್ಪಷ್ಟೀಕರಣ ನೀಡಲಾಗಿದೆ.

WhatsApp Group Join Now
Telegram Group Join Now

ಏನಿದು ಯೋಜನೆ (Financial assistance for children)?

 Financial assistance for children

ರಾಜ್ಯದಲ್ಲಿ 18 ವರ್ಷದ ಒಳಗಿನ ಮಕ್ಕಳು ಕೆಲಸಕ್ಕೆ ಹೋಗುವುದನ್ನು ತಪ್ಪಿಸಲು ಹಾಗೂ ಶಿಕ್ಷಣ ಸಿಗುವಂತೆ, ಹಾಗೂ ಅವರಿಗೆ ಆರ್ಥಿಕ ಭದ್ರತೆಗೋಸ್ಕರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ರೂಪಿಸಲಾಗಿರುವ ಯೋಜನೆಯಲ್ಲಿ ಮಾಸಿಕ 4,000 ರೂ.ನಂತೆ ಒಂದು ವರ್ಷ ಅಥವಾ 18 ವರ್ಷ ತುಂಬುವವರೆಗೆ ಶಿಕ್ಷಣ ಹಾಗೂ ಪೌಷ್ಟಿಕ ಆಹಾರಕ್ಕಾಗಿ ಆರ್ಥಿಕ ಸಹಾಯ ನೀಡಲಾಗುತ್ತದೆ.

ಯಾರು ಇದರ ಉಪಯೋಗ ಪಡೆಯಬಹುದಾಗಿದೆ?

Financial assistance for children ಈ ಯೋಜನಯಡಿಯಲ್ಲಿ ತಂದೆ ಇಲ್ಲದ ಮಕ್ಕಳು, ತಾಯಿ ವಿಚ್ಛೇದಿತ, ಕುಟುಂಬದಿಂದ ದೂರ ಉಳಿದ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ.

ಇನ್ನು ಪೋಷಕರು ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿದ್ದರೆ, ಹಾಗೂ ಪೋಷಕರು ಮಕ್ಕಳನ್ನು ನೋಡಿಕೊಳ್ಳಲು ಅಸಮರ್ಥರಾಗಿದ್ದರೆ ಅರ್ಜಿ ಸಲ್ಲಿಸಬಹುದಾಗಿದೆ.

ಬಾಲ ನ್ಯಾಯ ಕಾಯ್ದೆ ಮಕ್ಕಳ ಪಾಲನೆ ಮತ್ತು ರಕ್ಷಣೆ ಅಗತ್ಯ ಇರುವ ಮಕ್ಕಳು, ನೈಸರ್ಗಿಕ ವಿಕೋಪಕ್ಕೆ ಒಳಾಗಾದ, ಅನಾಥ ಮಕ್ಕಳು, ಬಾಲಕಾರ್ಮಿಕ ಮಕ್ಕಳು, ಬಾಲ್ಯ ವಿವಾಹ ಸಂತ್ರಸ್ತ ಮಕ್ಕಳು, ಕಳ್ಳ ಸಾಗಾಣಿಕೆಗೆ ಒಳಗಾದ ಮಕ್ಕಳು, ಬೀದಿ ಬದಿಯಲ್ಲಿರುವ ಮಕ್ಕಳು, ಅಂಗ ವೈಕಲ್ಯ ಶೋಷಿತ ಮಕ್ಕಳು,ಭಿಕ್ಷುಕ ಮಕ್ಕಳು ತೀರಾ ಬಡತನದ ಮಕ್ಕಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸ್ವಯಂ ಉದ್ಯೋಗ ಮಾಡುವವರಿಗೆ 2ಲಕ್ಷ ರೂ. ಸಬ್ಸಿಡಿ ಸಾಲ ಸೌಲಭ್ಯ, ಇಲ್ಲದೆ ಅರ್ಜಿ ವಿಧಾನ Devaraj Urs subsidy loan scheme

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು:

  • ನಿಮ್ಮ ವಿವರಗಳ ಮನವಿ ಅರ್ಜಿ
  • ತಂದೆ ಮರಣ ಹೊಂದಿದಲ್ಲಿ ಮರಣ ಪ್ರಮಾಣ ಪತ್ರ ಅಥವಾ ವಿಚ್ಛೇದಿತ ಕುಟುಂಬಗಳ ನ್ಯಾಯಾಲಯ ಆದೇಶದ ಪ್ರತಿ
  • ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಲ್ಲಿ ಅಥವಾ ದೈಹಿಕವಾಗಿ ಅಸಮರ್ಥರಾಗಿದ್ದಲ್ಲಿ ವೈದ್ಯರಿಂದ ದೃಢೀಕರಿಸಿದ ಪ್ರತಿ
  • ನೈಸರ್ಗಿಕ ವಿಕೋಪಕ್ಕೆ ಒಳಗಾದಲ್ಲಿ ಅದರ ದೃಡೀಕರಣ ಪತ್ರ
  • ಆದಾಯ ಹಾಗೂ ಜಾತಿ ಪ್ರಮಾಣ ಪತ್ರ
  • ಶಾಲಾ ವ್ಯಾಸಂಗ ಪ್ರಮಾಣ ಪತ್ರ
  • ಜನನ ಪ್ರಮಾಣ ಪತ್ರ
  • ಮಗುವಿನ ಭಾವಚಿತ್ರ
  • ರೇಷನ್ ಕಾರ್ಡ್ ಪ್ರತಿ
  • ಮಗುವಿನ ಹಾಗೂ ಪೋಷಕರ ಆಧಾರ್ ಕಾರ್ಡ್ ಪ್ರತಿ
  • ಮಗುವಿನ ಬ್ಯಾಂಕ್ ಖಾತೆ ಪ್ರತಿ

ಅರ್ಜಿಯ ಆಯ್ಕೆ ವಿಧಾನ ಹೇಗೆ?

ನೀವು ಅರ್ಜಿ ಸಲ್ಲಿಸಿದ ಬಳಿಕ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು  ನಿಮ್ಮ ಅರ್ಜಿ ವಿವರಗಳನ್ನು ಪರಿಶೀಲಿಸಿ, ಅರ್ಹ ಹಾಗೂ ಆರ್ಥಿಕ ಸಹಾಯ ಅಗತ್ಯವಿರುವ ಮಕ್ಕಳಿಗೆ ಡಿಬಿಟಿ ಮೂಲಕ ಅವರ ಖಾತೆ ಹಣ ಜಮೆ ಮಾಡಲಾಗುತ್ತದೆ.

ಹೆಚ್ಚಿನ ವಿವರಗಳಿಗೆ ಜಿಲ್ಲಾಮಕ್ಕಳ ರಕ್ಷಣಾಧಿಕಾರಿ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಅಥವಾ ನಿಮ್ಮ ತಾಲ್ಲೂಕು ಮಕ್ಕಳಾ ರಕ್ಷಣಾ ಘಟಕ ಕಚೇರಿ ಸಂಪರ್ಕಿಸಿ ವಿವರ ಪಡೆಯಬಹುದಾಗಿದೆ.

ಅನ್ನಭಾಗ್ಯ ಯೋಜನೆಯಲ್ಲಿ ಮನೆಯ ಪ್ರತೀ ಸದಸ್ಯನಿಗೂ ತಿಂಗಳಿಗೆ 170 ರೂ. ಸಿಗಲಿದೆ | Annabhagya yojane 2024

ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ 5,000 ರೂ. ನೇರವಾಗಿ ಮಹಿಳೆಯರ ಖಾತೆಗೆ ಜಮೆ, Pradhan Mantri Matru Vandana yojana

PM Awas Yojana 2024: ಪಿಎಂ ಆವಾಸ್ ಯೋಜನೆಯಲ್ಲಿ ಉಚಿತ ಮನೆ ಅಥವಾ ಹೋಮ್ ಲೋನ್ ಪಡೆಯಲು ಅರ್ಜಿ ಸಲ್ಲಿಸಿ


Share this page
WhatsApp Group Join Now
Telegram Group Join Now

2 thoughts on “ಈ ಯೋಜನೆಯಡಿಯಲ್ಲಿ ಮಕ್ಕಳಿಗೆ ಪ್ರತೀ ತಿಂಗಳು 4000ರೂ. ಸಿಗಲಿದೆ, ಯಾರು ಅರ್ಜಿ ಸಲ್ಲಿಸಬಹುದು ಇಲ್ಲಿದೆ ವಿವರ Financial assistance for children”

Leave a Comment