ಸ್ವಯಂ ಉದ್ಯೋಗ ಮಾಡುವವರಿಗೆ 2ಲಕ್ಷ ರೂ. ಸಬ್ಸಿಡಿ ಸಾಲ ಸೌಲಭ್ಯ, ಇಲ್ಲದೆ ಅರ್ಜಿ ವಿಧಾನ Devaraj Urs subsidy loan scheme

Share this page

ಡಿ. ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ (Devaraj Urs subsidy loan scheme) ಯಡಿಯಲ್ಲಿ ನೀವು ಈಗ ರೂ. 2 ಲಕ್ಷದವರೆಗೆ ಸಾಲ ಪಡೆಯಬಹುದಾಗಿದೆ, ಹಾಗೂ ಈ ಸಾಲಕ್ಕೆ ನಿಮಗೆ ಗರಿಷ್ಠ ರೂ. 30 ಸಾವಿರದ ತನಕ ಸಬ್ಸಿಡಿ ದೊರೆಯಲಿದೆ, ಹಾಗಾದರೆ ಯಾರು ಈ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದು, ಬೇಕಾಗಿರುವ ದಾಖಲೆಗಳು, ಅರ್ಜಿ ಸಲ್ಲಿಸುವ ವಿವರ ಈ ಕೆಳಗೆ ನೀಡಲಾಗಿದೆ.

WhatsApp Group Join Now
Telegram Group Join Now

ಡಿ. ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ (Devaraj Urs subsidy loan scheme) :

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಡಿಯಲ್ಲಿ ಸರ್ಕಾರವು 2024-25 ನೇ ಸಾಲಿನಲ್ಲಿ ಸ್ವಯಂ ಉದ್ಯೋಗ, ವ್ಯಾಪಾರ ಚಟುವಟಿಕೆಗಳಿಗೆ ವೈಯಕ್ತಿಕ ಸಾಲಕ್ಕೆ ಅರ್ಜಿ ಅರ್ಜಿ ಆಹ್ವಾನಿಸಿದೆ.

ಸ್ವಯಂ ಉದ್ಯೋಗ ಮಾಡುವವರಿಗೆ 2ಲಕ್ಷ ಸಬ್ಸಿಡಿ ಸಾಲ ಸೌಲಭ್ಯ, ಇಲ್ಲದೆ ಅರ್ಜಿ ವಿಧಾನ Devaraj Urs subsidy loan scheme
Devaraj Urs subsidy loan scheme

ಈ ಯೋಜನೆಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ನಿರುದ್ಯೋಗಿ ಫಲಾನುಭವಿಗಳು ವ್ಯಾಪಾರ, ಕೈಗಾರಿಕೆ, ಕೃಷಿ ಚಟುವಟಿಕೆ, ಸಾರಿಗೆ, ಸೇವಾ ವಲಯದಲ್ಲಿ ಆರ್ಥಿಕ ಚಟುವಟಿಕೆಗೆ ಸಹಾಯವಾಗಲು ಈ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಗರಿಷ್ಠ ರೂ. 2 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ.

ನಿಮಗೆ ಈ ಯೋಜನೆಯಲ್ಲಿ ಕನಿಷ್ಠ 1 ಲಕ್ಷದ ವರೆಗಿನ ಸಾಲದಲ್ಲಿ 20 ಸಾವಿರದ ತನಕ ಹಾಗೂ ಗರಿಷ್ಠ 2 ಲಕ್ಷದವರೆಗೆ ಸಾಲಗಳಲ್ಲಿ ಗರಿಷ್ಠ 30 ಸಾವಿರದ ತನಕ ನಿಮಗೆ ಸಬ್ಸಿಡಿ ರೂಪದಲ್ಲಿ ಸಹಾಯಧನ ನೀಡಲಾಗುತ್ತದೆ, ಇನ್ನು ಉಳಿದ ಹಣಕ್ಕೆ ಶೇ. 4 ರ ಬಡ್ಡಿ ದರದಲ್ಲಿ ನೀವು ಸಾಲ ಮರುಪಾವತಿ ಮಾಡಬೇಕಾಗಿರುತ್ತದೆ.

ಯಾರು ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದು?

ಈ ಯೋಜನೆಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದ ಉದ್ಯೋಗ ಮಾಡಬಯಸುವವರು ಅರ್ಜಿ ಸಲ್ಲಿಸಬಹುದಾಗಿದೆ.

ಹಾಗೂ ಗ್ರಾಮೀಣ ಪ್ರದೇಶದ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ. 98,000 ಹಾಗೂ ಪಟ್ಟಣ ಪ್ರದೇಶದವರ ವಾರ್ಷಿಕ ಆದಾಯ ರೂ. 1,20,000 ಒಳಗಿರಬೇಕು, ಅರ್ಜಿದಾರರ ವಯಸ್ಸು 18 ರಿಂದ 55 ರ ಒಳಗಿರಬೇಕು.

ಅರ್ಜಿ ಸಲ್ಲಿಸಲು ಇರಬೇಕಾದ ದಾಖಲೆಗಳು

  • ಜಾತಿ ಪ್ರಮಾಣಪತ್ರ
  • ಆದಾಯ ಪ್ರಮಾಣಪತ್ರ
  • ಆಧಾರ್ ಕಾರ್ಡ್ ಪ್ರತಿ
  • ಬ್ಯಾಂಕ್ ಪಾಸ್ ಪುಸ್ತಕ ಪ್ರತಿ
  • ರೇಷನ್ ಕಾರ್ಡ್
  • ಇತ್ತೀಚಿನ ಭಾವಚಿತ್ರ

ಅರ್ಜಿ ಸಲ್ಲಿಸುವ ವಿಧಾನ :

ನೀವು ಈ ಯೋಜನೆಗೆ ಅರ್ಜಿಯನ್ನು ನೇರವಾಗಿ ನಿಮ್ಮ ಜಿಲ್ಲೆಯ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಕಚೇರಿಯಲ್ಲಿ ಅಥವಾ ಸೇವಾ ಸಿಂಧು ತಂತ್ರಾಂಶದ ಮುಖಾಂತರ ಸೇವಾ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಈ ಯೋಜನೆಯಡಿಯಲ್ಲಿ ಮಕ್ಕಳಿಗೆ ಪ್ರತೀ ತಿಂಗಳು 4000ರೂ. ಸಿಗಲಿದೆ, ಯಾರು ಅರ್ಜಿ ಸಲ್ಲಿಸಬಹುದು ಇಲ್ಲಿದೆ ವಿವರ Financial assistance for children

ಅನ್ನಭಾಗ್ಯ ಯೋಜನೆಯಲ್ಲಿ ಮನೆಯ ಪ್ರತೀ ಸದಸ್ಯನಿಗೂ ತಿಂಗಳಿಗೆ 170 ರೂ. ಸಿಗಲಿದೆ | Annabhagya yojane 2024

ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ 5,000 ರೂ. ನೇರವಾಗಿ ಮಹಿಳೆಯರ ಖಾತೆಗೆ ಜಮೆ, Pradhan Mantri Matru Vandana yojana


Share this page
WhatsApp Group Join Now
Telegram Group Join Now

3 thoughts on “ಸ್ವಯಂ ಉದ್ಯೋಗ ಮಾಡುವವರಿಗೆ 2ಲಕ್ಷ ರೂ. ಸಬ್ಸಿಡಿ ಸಾಲ ಸೌಲಭ್ಯ, ಇಲ್ಲದೆ ಅರ್ಜಿ ವಿಧಾನ Devaraj Urs subsidy loan scheme”

Leave a Comment