ನಿಮ್ಮ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಆಗಲಿದೆ? ಸರ್ಕಾರದ ಖಡಕ್ ನಿರ್ಧಾರ | BPL Card Cancellation

Share this page

ಹೌದು, ಈ ಬಾರಿ ರಾಜ್ಯ ಸರ್ಕಾರವು ಮತ್ತೆ ಎಚ್ಚರಿಸಿದ್ದು, ರಾಜ್ಯದಲ್ಲಿ ಈ ಬಾರಿ ಸುಮಾರು 40 ಲಕ್ಷಕ್ಕೂ ಅಧಿಕ ಅನರ್ಹ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ (BPL Card Cancellation) ಆಗಲಿದೆ.

WhatsApp Group Join Now
Telegram Group Join Now

ನಿಮ್ಮ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ (BPL Card Cancellation) !

ಸರ್ಕಾರವು ಬಿಪಿಎಲ್ ಕಾರ್ಡ್ ಪಡೆಯಲು ಕೆಲವು ಷರತ್ತು ವಿಧಿಸಿದ್ದು, ಬಿಪಿಎಲ್ ಕಾರ್ಡ್ ಕೇವಲ ಬಡವರಿಗಾಗಿ ಮಾತ್ರ ಎಂದು ತಿಳಿದಿದ್ದರೂ ಅನೇಕ ಜನರು ಕುಟುಂಬಗಳು ಸ್ಥಿತಿವಂತರಾಗಿದ್ದರೂ ಬಿಪಿಎಲ್ ಕಾರ್ಡ್ ಪಡೆದು ಸರ್ಕಾರವನ್ನು ವಂಚಿಸುತ್ತಿದ್ದಾರೆ.

ಒಂದು ವೇಳೆ ನೀವೂ ಕೂಡ ಸರ್ಕಾರಕ್ಕೆ ಸುಳ್ಳು ದಾಖಲೆ ಅಥವಾ ನಿಮ್ಮ ವಿವರಗಳನ್ನು ಮುಚ್ಚಿಟ್ಟು ಕಾರ್ಡ್ ಪಡೆದಿದ್ದಲ್ಲಿ ನಿಮ್ಮ ಕಾರ್ಡ್ ಕೂಡ ಕ್ಯಾನ್ಸಲ್ ಆಗಲಿದೆ.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸಹಾಯವಾಗುವ ಉದ್ದೇಶದಿಂದ ಸರ್ಕಾರವು ಬಿಪಿಎಲ್ ಕಾರ್ಡ್ ನೀಡುತ್ತಿದ್ದು, ಈ ಕಾರ್ಡ್ ನಿಂದ ಸರ್ಕಾರದಿಂದ  ಅನ್ನಭಾಗ್ಯ, ಕಾನ್ಸರ್, ಹೃದಯ ಚಿಕಿತ್ಸೆ ಸೇರಿದಂತೆ ದುಬಾರಿ ವೆಚ್ಚದ ಖಾಯಿಲೆಗೆ ಉಚಿತ ಚಿಕಿತ್ಸೆ ಸಿಗುತ್ತದೆ, ಹಾಗೂ ಸರಕಾರದಿಂದ ಬಡವರಿಗೆ ಬಿಡುಗಡೆಯಾಗುವ ಎಲ್ಲಾ ಯೋಜನೆಗಳು ಇವರಿಗೆ ಸಿಗುತ್ತದೆ, ಈ ಬಾರಿ ಜಾರಿಯಾದ ಅನ್ನಭಾಗ್ಯ ಹಣ, ಗೃಹಲಕ್ಷ್ಮೀ ಯೋಜನೆ ಹಣ ಕೂಡ ಬಿಪಿಎಲ್ ಗ್ರಾಹಕರಿಗೆ ಸಿಗಲಿದ್ದು, ಈ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಸುಳ್ಳು ದಾಖಲೆ ನೀಡಿ ಹೆಚ್ಚಿನವರು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ

ಬಿಪಿಎಲ್ ಕಾರ್ಡ್ ಪಡೆಯಲು ಷರತ್ತುಗಳು:

ಬಿಪಿಎಲ್ ಕಾರ್ಡ್ ಬಡವರಿಗಾಗಿ ಸವಲತ್ತುಗಳನ್ನು ನೀಡುವ ಉದ್ದೇಶದಿಂದ ನೀಡಲಾಗುತ್ತಿದ್ದು, ಈ ಕಾರ್ಡ್ ಪಡೆಯಲು ಈ ಎಲ್ಲಾ ಷರತ್ತು ಒಳಗೊಂಡಿರುತ್ತದೆ :

ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಹೆಚ್ಚಿದ್ದರೆ ಬಿಪಿಎಲ್ ಕಾರ್ಡ್ ಹೊಂದುವಂತಿಲ್ಲ.

ನೀವು IT Returns ಪಾವತಿಸುತ್ತಿದ್ದರೆ ನೀವು ಬಿಪಿಎಲ್ ಕಾರ್ಡ್ ಹೊಂದುವಂತಿಲ್ಲ.

ವೈಟ್ ಬೋರ್ಡ್ ನಾಲ್ಕು ಚಕ್ರ ವಾಹನ ಹೊಂದುವಂತಿಲ್ಲ.

ಕೃಷಿ ಪಂಪ್ ಸೆಟ್ ಗೆ ಆಧಾರ್ ಲಿಂಕ್ ಕಡ್ಡಾಯ, ಆದೇಶ ಹೊರಡಿಸಿದ ಇಂಧನ ಇಲಾಖೆ! Aadhaar and irrigation pumpset link

ಹಳ್ಳಿ ಪ್ರದೇಶದಲ್ಲಿ 3 ಹೆಕ್ಟೇರ್ ಗಿಂದ ಹಾಗೂ ಪಟ್ಟಣ ಪ್ರದೇಶದಲ್ಲಿ 1000 ಚದರ ಅಡಿಗಿಂತ ದೊಡ್ಡ ಸ್ವಂತ ಮನೆ ಹೊಂದುವಂತಿಲ್ಲ.

ಸರ್ಕಾರಿ ಹಾಗೂ ಅರೆ ಸರ್ಕಾರಿ ಕೆಲಸದಲ್ಲಿ ಕುಟುಂಬದ ಸದಸ್ಯರು ಇದ್ದಲ್ಲಿ ಬಿಪಿಎಲ್ ಕಾರ್ಡ್ ಪಡೆಯುವಂತಿಲ್ಲ.

ಇನ್ನು ಒಂದು ಮನೆಯಲ್ಲಿ ಒಂದೇ ಕಾರ್ಡ್ ಹೊಂದಬೇಕು, ರಾಜ್ಯದಲ್ಲಿ ಅನೇಕ ಕುಟುಂಬಗಳು ಒಂದೇ ಮನೆಯಲ್ಲಿದ್ದರೂ ಪ್ರತ್ಯೇಕ ಕಾರ್ಡ್ ಹೊಂದಿದ್ದಾರೆ.

ಈ ಮೇಲಿನ ಷರತ್ತುಗಳು ಇದ್ದರೂ ಕೂಡ ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕೂ ಅಧಿಕ ಕುಟುಂಬಗಳು ಸರ್ಕಾರವನ್ನು ವಂಚಿಸಿ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ.

ಅನರ್ಹ ಕಾರ್ಡ್ ವಿರುದ್ಧ ಕ್ರಮಕ್ಕೆ ಸಿಎಂ ಆದೇಶ (BPL Card Cancellation)

ರಾಜ್ಯದಲ್ಲಿ ಸುಮಾರು 1.27 ಕೋಟಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಇದ್ದು, ಇವರೆಲ್ಲ ಸರ್ಕಾರದ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ, ಸರ್ಕಾರವು ಈಗಾಗಲೇ ಸ್ಥಿತಿವಂತರು ಬಿಪಿಎಲ್ ಕಾರ್ಡ್ ಹೊಂದಿದ್ದಲ್ಲಿ ತಮ್ಮ ಕಾರ್ಡ್ ವಾಪಸ್ಸು ಮಾಡುವಂತೆ ತಿಳಿಸುತ್ತಿದ್ದು, ಈಗ ಸಿಎಂ ಕೂಡ ಅಧಿಕಾರಿಗಳಿಗೆ ಆದೇಶ ನೀಡಿದ್ದು, ಈ ನಿಟ್ಟಿನಲ್ಲಿ ಆಹಾರ ಇಲಾಖೆಯು ಈ ಅನರ್ಹ ಬಿಪಿಎಲ್ ಕಾರ್ಡ್ ಕಾರ್ಡ್ ಪತ್ತೆ ಹಚ್ಚಿ ಅವುಗಳನ್ನು ಎಪಿಎಲ್ ಕಾರ್ಡ್ ಗೆ ಬದಲಾಯಿಸಲಿದೆ.

ಇದನ್ನೂ ಓದಿ :

ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಸೇರ್ಪಡೆಗೆ ಅವಕಾಶ, ಮುಗಿಯದ ಸರ್ವರ್ ಸಮಸ್ಯೆ !

ನಿಮಗೆ ಬಂದಿರುವ ಅನ್ನಭಾಗ್ಯ ಹಣವನ್ನು ಇಲ್ಲಿ ಚೆಕ್ ಮಾಡಿ|annabhagya DBT amount check

ಕಾರ್ಮಿಕರ ಮಕ್ಕಳಿಗೆ ರೂ.25,000 ರವರೆಗೆ ಸ್ಕಾಲರ್ಷಿಪ್ ಪಡೆಯಲು ಅರ್ಜಿ ಸಲ್ಲಿಸಿ: NSP Scholarship 2024

ಮಣಿಪಾಲ ಆರೋಗ್ಯಕಾರ್ಡ್ ನೋಂದಣಿ ಆರಂಭ, ಇಲ್ಲಿದೆ ಶುಲ್ಕ ಹಾಗೂ ಅರ್ಜಿ ವಿವರ : Manipal Arogya Card


Share this page
WhatsApp Group Join Now
Telegram Group Join Now

2 thoughts on “ನಿಮ್ಮ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಆಗಲಿದೆ? ಸರ್ಕಾರದ ಖಡಕ್ ನಿರ್ಧಾರ | BPL Card Cancellation”

Leave a Comment