ರೈತರೇ ನಿಮಗೆ ಬರ ಪರಿಹಾರ ಹಣ ಜಮೆಯಾಗಿಲ್ಲವೇ? ಹಾಗಾದರೆ ಈ ಕೆಲಸ ಮಾಡಿ : Bara parihara amount not recived reasons

Share this page

ಬರ ಪರಿಹಾರ ಹಣ ಜಮೆಯಾಗಿಲ್ಲ: ಸರಕಾರವು ಈ ಬಾರಿ 2023-24 ನೇ ಸಾಲಿನ ಖಾರಿಫ್ ಮುಂಗಾರು ಬರ ಪರಿಹಾರವಾಗಿ 3 ಬಾರಿ ಹಣ ಬಿಡುಗಡೆ ಮಾಡಿದ್ದು, ಬಹುತೇಕ ಎಲ್ಲಾ ರೈತರ ಖಾತೆಗೆ ನೇರವಾಗಿ ಹಣ ಜಮೆಯಾಗಿದ್ದು, ಒಂದುವೇಳೆ ನಿಮಗೆ ಬರ ಪರಿಹಾರ ಹಣ ಜಮೆಯಾಗಿಲ್ಲವೆಂದರೆ ಈ ತಪ್ಪುಗಳಿಂದ ನಿಮಗೆ ಜಮೆಯಾಗದೇ ಇರಬಹುದಾಗಿದ್ದು (Bara parihara amount not recived reasons) , ಸರಿಪಡಿಸಿಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now

ಈ ಕಾರಣದಿಂದ ನಿಮಗೆ ಬರ ಪರಿಹಾರ ಹಣ ಜಮೆಯಾಗಿಲ್ಲದೇ ಇರಬಹುದು :

ರಾಜ್ಯದಲ್ಲಿ ಈ ಬಾರಿ ಸರ್ಕಾರವು 3 ಬಾರಿ ಬರಪರಿಹಾರ ಹಣ ರೈತರ ಖಾತೆಗೆ ಜಮೆ ಮಾಡಿದ್ದು, ಕೊನೆಯದಾಗಿ ಸಣ್ಣ ಹಾಗೂ ಅತೀ ಸಣ್ಣ ರೈತರುಗಳಿಗೆ ಗರಿಷ್ಠ 3,000 ರೂ. ತನಕ ಹಣ ಜಮೆ ಮಾಡಿದೆ, ಈ ಕೆಳಗಿನ ಕಾರಣದಿಂದ ನಿಮಗೆ ಹಣ ಬಾರದೆ ಇರಬಹುದು:

ನಿಮ್ಮ FID ರಚಿತವಾಗಿರಬೇಕು

ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ರೈತರ ಗುರುತಿಸಲು Farmer ID ಖಾತೆ ವ್ಯವಸ್ಥೆ ಗೊಳಿಸಿದ್ದು, ಇದರಲ್ಲಿ ನಿಮ್ಮ ಕೃಷಿ ವಿವರ, ಜಮೀನಿನ ವಿವರ ಎಲ್ಲವನ್ನೂ ದಾಖಲಿಸಿರಬೇಕಾಗುತ್ತದೆ, ಇದರಿಂದ ಸರ್ಕಾರವು ಸುಲಭವಾಗಿ ಅರ್ಹ ರೈತರುಗಳನ್ನು ಗುರುತಿಸಲು ಹಾಗೂ ಸರ್ಕಾರದ ಯೋಜನೆ ಅಥವಾ ಪರಿಹಾರ ಹಣವನ್ನು ನೇರವಾಗಿ ರೈತರಿಗೆ ತಲುಪಿಸಲು ಈ ಖಾತೆ ಸಹಾಯಕವಾಗಲಿದೆ.

ಒಂದುವೇಳೆ ನೀವು ಈ ಖಾತೆ ಹೊಂದದೇ ಇದ್ದಲ್ಲಿ ನಿಮಗೆ ಕೃಷಿಕರಿಗೆ ಸಿಗುವ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ, ಇದರಂತೆ ಬರ ಪರಿಹಾರ ಹಣ ಕೂಡ ಬರುವುದಿಲ್ಲ ಆದ್ದರಿಂದ ತಕ್ಷಣ FID ಈಗಾಗಲೇ ರಚಿತವಾಗದೆ ಇದ್ದಲ್ಲಿ ತಕ್ಷಣ ಮಾಡಿಸಿಕೊಳ್ಳಿ.

ಇದನ್ನು ಓದಿ : ನೀವು FRUITS/ FID ಹೊಂದಿದ್ದೀರಾ? ಕೃಷಿ ಸೌಲಭ್ಯ ಪಡೆಯಲು ಹೊಂದಿರಲೇಬೇಕು, ಇಲ್ಲಿದೆ ಫ್ರೂಟ್ಸ್ ಖಾತೆ ಪಡೆಯುವ ವಿಧಾನ

ಪಹಣಿ ಹಾಗೂ ಆಧಾರ್ ಜೋಡಣೆ ಕಡ್ಡಾಯ

ಹೌದು ಸರ್ಕಾರವು ಈ ಬಾರಿ ಆಧಾರ್ ಹಾಗೂ ಪಹಣಿ (Aadhaar RTC link) ಮಾಡುವುದು ಕಡ್ಡಾಯವೆಂದು ತಿಳಿಸಿದ್ದು, ಒಂದುವೇಳೆ ನೀವು ಲಿಂಕ್ ಮಾಡಿಸದೇ ಇದ್ದಲ್ಲಿ ನಿಮಗೆ ಸರ್ಕಾರದಿಂದ ಸಿಗುವ ಪರಿಹಾರ ಹಣ ಸಿಗುವುದಿಲ್ಲ, ಈಗ ಸರ್ಕಾರವು ನೇರವಾಗಿ ಆಧಾರ್ ಮೂಲಕ  ಹಣ ಪಾವತಿ ಮಾಡುವುದರಿಂದ ನಿಮ್ಮ ಆಧಾರ್ ಲಿಂಕ್ ಆಗದೆ ಇದ್ದಲ್ಲಿ ನಿಮಗೆ ಹಣ ಬರುವುದಿಲ್ಲ.

ಇದನ್ನು ಓದಿ : RTC Aadhaar Card link ಕಡ್ಡಾಯ, ಮೊಬೈಲ್ ನಲ್ಲಿ 2 ನಿಮಿಷದಲ್ಲಿ ಆರ್ಟಿಸಿಗೆ ಆಧಾರ್ ಲಿಂಕ್ ಮಾಡುವ ವಿಧಾನ ಇಲ್ಲಿದೆ.

ಆಧಾರ್ ಹಾಗೂ ಬ್ಯಾಂಕ್ ಖಾತೆ ಲಿಂಕ್

ಒಂದುವೇಳೆ ನಿಮ್ಮ ಆಧಾರ್ ಜೊತೆಗೆ ನಿಮ್ಮ ಯಾವುದೇ ಬ್ಯಾಂಕ್ ಖಾತೆಯೂ ಲಿಂಕ್ ಆಗಿರದೇ ಇದ್ದ ಪಕ್ಷದಲ್ಲಿ ನಿಮಗೆ ಸರ್ಕಾರವು ಬರಪರಿಹಾರ ಹಣ ಜಮೆ ಮಾಡಲು ಸಾದ್ಯವಾಗುವುದಿಲ್ಲ, ಕಾರಣ ಸರ್ಕಾರವು ಡಿಬಿಟಿ ಮೂಲಕ ನೇರ ನಗದು ವರ್ಗಾವಣೆ ಮಾಡುವುದರಿಂದ ನಿಮ್ಮ ಬ್ಯಾಂಕ್ ಖಾತೆ ಲಿಂಕ್ ಆಗದೆ ಇದ್ದಲ್ಲಿ ಹಣ ಬರುವುದಿಲ್ಲ, ಆದ್ದರಿಂದ ತಕ್ಷಣ ನಿಮ್ಮ ಆಧಾರ್ ನೀಡಿ ಬ್ಯಾಂಕ್ ನಲ್ಲಿ ಖಾತೆ ಲಿಂಕ್ ಮಾಡಿಸಿಕೊಳ್ಳಿ.

ಬರ ಪೀಡಿತ ಊರುಗಳಿಗೆ ಮಾತ್ರ ಹಣ ಜಮೆ

ಹೌದು, ಸರ್ಕಾರವು ಪ್ರತೀ ವರ್ಷ ಸರ್ವೇ ನಡೆಸಿ ಅರ್ಹ ಬರ ಪೀಡಿತ ಪ್ರದೇಶವನ್ನು ಮಾತ್ರ ಬರಪೀಡಿತ ಪ್ರದೇಶವೆಂದು ಘೋಷಿಸುತ್ತದೆ, ಒಂದು ವೇಳೆ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಬರ ಪೀಡಿತ ಪ್ರದೇಶಕ್ಕೆ ಒಳಪಟ್ಟಿಲ್ಲವಾದಲ್ಲಿ ನಿಮಗೆ ಬರಪರಿಹಾರ ಹಣ ಬರುವುದಿಲ್ಲ.

ಬೆಳೆಯ ವಿವರ ಪಹಣಿಯಲ್ಲಿ ಬೆಳೆ ಸಮೀಕ್ಷೆಯಲ್ಲಿ ನಮೂದಿಸಿರಬೇಕು

ಹೆಚ್ಚಿನ ರೈತರುಗಳಿಗೆ ಈ ಕಾರಣದಿಂದ ಹಣ ಬಾರದೇ ಇರಬಹುದು, ರೈತರು ತಮ್ಮ ಜಮೀನಿನ ಚಟುವಟಿಕೆಗಳ ವಿವರವನ್ನು ಬೆಲೆ ಸಮೀಕ್ಷೆಯಲ್ಲಿ ವಿವರವಾಗಿ ನಮೂದಿಸಿರಬೇಕು, ಈ ಮೂಲಕ ನಿಮ್ಮ ಬೆಳೆಯ ಮೌಲ್ಯದ ವಿವರ ಸಿಗುತ್ತದೆ, ಬೆಳೆ ಸಮೀಕ್ಷೆಯಲ್ಲಿ ನಮೂದಿಸದೇ ಇದ್ದಲ್ಲಿ ನಿಮ್ಮದು ಖಾಲಿ ಭೂಮಿ ಎಂದು ಬಿಂಬಿತವಾಗುತ್ತದೆ, ನೀವು ಬೆಳೆ ವಿಮೆ ಮಾಡುವ ಸಂದರ್ಭದಲ್ಲೂ ಬೆಳೆ ಸಮೀಕ್ಷೆ ಮಾಹಿತಿ ಮುಖ್ಯವಾಗಿದೆ.

ಈ ಮೇಲಿನ ಕಾರಣಗಳನ್ನು ಹೊರತುಪಡಿಸಿ ನಿಮಗೇ ಬರಬರಿಹಾರ ಹಣವು ಜಮೆಯಾಗದೆ ಇದ್ದಲ್ಲಿ ನೀವು ನಿಮ್ಮ ಹತ್ತಿರದ ಗ್ರಾಮ ಪಂಚಾಯತ್, ಕಂದಾಯ ಇಲಾಖೆ, ಕೃಷಿ ಇಲಾಖೆಯನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಿ.


Share this page
WhatsApp Group Join Now
Telegram Group Join Now

2 thoughts on “ರೈತರೇ ನಿಮಗೆ ಬರ ಪರಿಹಾರ ಹಣ ಜಮೆಯಾಗಿಲ್ಲವೇ? ಹಾಗಾದರೆ ಈ ಕೆಲಸ ಮಾಡಿ : Bara parihara amount not recived reasons”

Leave a Comment