Bajaj CNG Bike: 120 ಕಿಮೀ ಮೈಲೇಜ್ ನೀಡುವ 95 ಸಾವಿರ ಬೆಲೆಯ ಮೊದಲ ಸಿಎನ್‌ಜಿ ಬೈಕ್ ಬಿಡುಗಡೆ

Share this page

BAJAJ CNG Bike: ಹೌದು, ವಿಶ್ವದ ಮೊದಲ ಸಿಎನ್‌ಜಿ ಬೈಕ್ ಅನ್ನು ಬಜಾಜ್ ಕಂಪನಿ ಫ್ರೀಡಂ (Bajaj Freedom) ಎನ್ನುವ ಹೆಸರಿನೊಂದಿಗೆ ಲಾಂಚ್ ಮಾಡಿದ್ದು, ಈ ಬೈಕ್ ಬಗೆಗಿನ ವಿವರ ಇಲ್ಲಿದೆ.

WhatsApp Group Join Now
Telegram Group Join Now

Bajaj CNG Bike ಬಜಾಜ್ ಫ್ರೀಡಂ 125 :

ಬಜಾಜ್ ಕಂಪನಿಯು ಬಜಾಜ್ ಫ್ರೀಡಂ 125 ಎನ್ನುವ ಸಿಎನ್‌ಜಿ ಚಾಲಿತ ಬೈಕ್ ಅನ್ನು ಬಿಡುಗಡೆ ಮಾಡಿದ್ದು, ಜನರಿಗೆ ಈ ವಾಹನದಲ್ಲಿ ಪೆಟ್ರೋಲ್ ಗಿಂತ ಉತ್ತಮ ಮೈಲೇಜ್ ದೊರೆಯಲಿದ್ದು, ಮುಂದಿನ ದಿನಗಳಲ್ಲಿ ಈ ಬೈಕ್ ಗಳಿಗೆ ಬಾರಿ ಬೇಡಿಕೆ ಉಂಟಾಗುವ ಸಾಧ್ಯತೆ ಇದೆ.

Bajaj fredom 125 CNG Bike, image credit Bajaj official website

ಸಿಎನ್‌ಜಿ ವಾಹನಗಳಿಗೆ ಬೇಡಿಕೆ :

ಸದ್ಯ ಮಾರುಕಟ್ಟೆಯಲ್ಲಿ ಸಿಎನ್‌ಜಿಯು ಕಾರುಗಳು ಈಗ ಹೆಚ್ಚಾಗಿ ಬರುತ್ತಿದ್ದು, ಹೆಚ್ಚಿನ ಕಾರುಗಳಲ್ಲಿ ಕಂಪನೆಯು ಪೆಟ್ರೋಲ್ ಜೊತೆಗೆ  ಸಿಎನ್‌ಜಿ ಆಯ್ಕೆಯೂ ನೀಡುತ್ತಿದ್ದು, ಇದರಲ್ಲಿ ಉತ್ತಮ ಮೈಲೇಜ್ ಸಿಗುವ ಕಾರಣಕ್ಕೆ ಜನರು ಸಿಎನ್‌ಜಿ ವಾಹನಗಳನ್ನು ಕೊಳ್ಳಲು ಮುಂದಾಗುತ್ತಿದ್ದಾರೆ,

ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗುತ್ತಲೇ ಇದ್ದು, ಸಿಎನ್‌ಜಿ ಬೆಲೆ ಕಡಿಮೆ ಇರುವುದರಿಂದ ಜೊತೆಗೆ ಸಿಎನ್‌ಜಿ ನಲ್ಲಿ ಉತ್ತಮ ಮೈಲೇಜ್ ದೊರಕುವ ಕಾರಣ ಜನರು ಸಿಎನ್‌ಜಿ ಇರುವ ವಾಹನ ಕೊಳ್ಳುತ್ತಿದ್ದು, ಈಗ ಮೊಟ್ಟ ಮೊದಲಿಗೆ ಸಿಎನ್‌ಜಿ ಬೈಕ್ ಕೂಡ ಮಾರುಕಟ್ಟೆಗೆ ಬಂದಿದೆ.

ಬಜಾಜ್ ಫ್ರೀಡಂ ಬೈಕ್ ಹೇಗಿದೆ?

ಈಗಾಗಲೇ ಈ ಬೈಕ್ (Bajaj CNG Bike) ಭಾರತದಲ್ಲಿ ಬಿಡುಗಡೆಗೊಂಡಿದ್ದು, ಸದ್ಯ ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಸಿಗಲಿದ್ದು, ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲೂ ಸಿಗಲಿದೆ.

ಈ ಬೈಕ್ ನ ಸೀಟ್ ನ ಅಡಿ ಬಾಗದಲಿ 12.5L/2kg ತುಂಬುವ CNG Cylinder ಇರಲಿದ್ದು, ಇದರ ಜೊತೆಗೆ 2Ltr petrol ತುಂಬಲು ಟ್ಯಾಂಕ್ ಕೂಡ ಇರುತ್ತದೆ, ಈ ಗಾಡಿ ಬಜಾಜ್ ಪ್ಲಾಟಿನಂ ಮಾದರಿಯಲ್ಲಿ ಇರಲಿದ್ದು, ಆದರೆ ಇದರ ತೂಕ 147kg ಇರಲಿದೆ.

Bajaj fredom 125 CNG Bike, image credit Bajaj official website

Bajaj CNG Bike ಬಜಾಜ್ ಫ್ರೀಡಂ ಬೈಕ್ ಸಾಮರ್ಥ್ಯ:

ಈ ಬೈಕ್ ನ ಮ್ಯಾಕ್ ಪವರ್ 9.5 Ps @8000 ಇರಲಿದ್ದು, ಟಾರ್ಕ್ 9.7 Nm @ 5000 ಇರಲಿದೆ, ಈ ಬೈಕ್ ನ ಟಾಪ್ ಸ್ಪೀಡ್ 90- 95 Km/h ಇರಲಿದೆ ಎಂದು ತಿಳಿಸಲಾಗಿದೆ.

SCDCC Bank Recruitment: ಬ್ಯಾಂಕ್ ನಲ್ಲಿ ಖಾಲಿ ಇರುವ 123 ಹುದ್ದೆಗಳಿಗೆ ಅರ್ಜಿ ಆಹ್ವಾನ

120 ಕಿಮೀ ಮೈಲೇಜ್?

ಕಂಪನಿಯು ತಿಳಿಸಿರುವಂತೆ Bajaj CNG Bike ಹೈಬ್ರಿಡ್ ಬೈಕ್ ಆಗಿದ್ದು, ಪೆಟ್ರೋಲ್ ಹಾಗೂ CNG ಎರಡರಲ್ಲೂ ಓಡಲಿದೆ, 2Kg ಸಿಎನ್‌ಜಿ ತುಂಬಿಸಬಹುದಾಗಿದ್ದು, 1kg ಸಿಎನ್‌ಜಿ ನಲ್ಲಿ 100ಕಿಮೀ ಓಡಿಸಬಹುದಾಗಿದ್ದು, ಇದರಲ್ಲಿ ಒಟ್ಟು 200Km ಚಲಿಸಬಹುದಾಗಿದೆ, ಅಂದರೆ ಈಗಿನ ಸಿಎನ್‌ಜಿ ದರ 85 ಆಗಿದ್ದರೆ, ಪೆಟ್ರೋಲ್ ಗೆ ಹೋಲಿಸಿದರೆ ಸುಮಾರು 120 ಕಿಮೀ ಮೈಲೇಜ್ ಸಿಕ್ಕಂತಾಗುತ್ತದೆ,

ಇನ್ನು ಸಿಎನ್‌ಜಿ ಜೊತೆಗೆ ಈ ಬೈಕ್ ನಲ್ಲಿ ಪೆಟ್ರೋಲ್ ಟ್ಯಾಂಕ್ ಕೂಡ ಇದ್ದು, ಇದು 2 Ltr ಕೆಪ್ಯಾಸಿಟಿ ಹೊಂದಿದ್ದು, ಕಂಪನಿ ಪ್ರಕಾರ 130KM ಓಡಿಸಬಹುದಾಗಿದೆ ಅಂದರೆ ಸುಮಾರು 75KM ಮೈಲೇಜ್ ಸಿಗಲಿದೆ.

ಬಜಾಜ್ ಫ್ರೀಡ್ ಸಿಎನ್‌ಜಿ ಬೈಕ್ ಬೆಲೆ :

ಈಗಾಗಲೇ ಈ ಬೈಕ್ ಲಾಂಚ್ ಆಗಿದ್ದು, 3 ವೈವಿಧ್ಯದಲ್ಲಿ ಸಿಗಲಿದ್ದು, ಫ್ರೀಡಂ 125 NG04 Disc LED ಗಾಡಿ ಬೆಲೆ ರೂ. 1,10,000 ಆಗಿದ್ದು, ಫ್ರೀಡಂ 125 NG04 Drum LED ಬೆಲೆ ರೂ. 1,05,000 ಆಗಿರಲಿದೆ, ಇನ್ನು ಫ್ರೀಡಂ 125 NG Drum ಬೆಲೆ ರೂ. 95,000 ಆಗಿರಲಿದ್ದು, ಇದು ex. Showroom ದರವಾಗಿರುತ್ತದೆ.

ಒಟ್ಟು 5 ಕಲರ್ ಗಳಲ್ಲಿ ಬೈಕ್ ಸಿಗಲಿದ್ದು, 16inch ಹಿಂದಿನ ಚಕ್ರ, ಬ್ಲೂಟೂತ್ ಜೊತೆಗೆ ಡಿಜಿಟಲ್ ಮೀಟರ್, LED ಹೆಡ್ ಲೈಟ್, 4 ಸ್ಟ್ರೋಕ್ air cooled ಇಂಜೆನ್ ಜೊತೆಗೆ ಆಕರ್ಷಕ ಲುಕ್ ನೊಂದಿಗೆ ಈ ಬೈಕ್ ಗ್ರಾಹಕರನ್ನು ಸೆಳೆಯುತ್ತಿದೆ.

ಸದ್ಯ ಮಾರುಕಟ್ಟೆ ಯಲ್ಲಿ ಪೆಟ್ರೋಲ್ ಬದಲಿಯಾಗಿ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನ ಗಳು ಬರುತ್ತಿದ್ದು, ಅದರಲ್ಲಿ ಉತ್ತಮ ಮೈಲೇಜ್ ದೊರೆತರೂ ಸಹ ಅದರಲ್ಲಿ ಕೆಲವು ಸಮಸ್ಯೆಗಳು ಎದುರಾಗುತ್ತಿದ್ದು, ಮುಖ್ಯವಾಗಿ ಚಾರ್ಜ್ ಹಾಕಲು ತುಂಬಾ ಸಮಯ ಬೇಕಾಗುತ್ತದೆ, ಇನ್ನು ಬ್ಯಾಟರಿ ಪರ್ಮನೆಟ್ ಅಲ್ಲದ ಕಾರಣ ಮುಂದೆ ಬದಲಾಯಿಸಲು ಬೈಕ್ ನಷ್ಟೇ ಹಣ ಪಾವತಿಸಬೇಕಾಗಬಹುದು,

ಆದರೆ ಸಿಎನ್‌ಜಿ ಬೈಕ್ ನಲ್ಲಿ ಈ ತೊಂದರೆ ಇಲ್ಲದಿರುವುದರಿಂದ ಜೊತೆಗೆ ಪೆಟ್ರೋಲ್ ಗಿಂತ ಉತ್ತಮ ಮೈಲೇಜ್ ದೊರೆಯುವ ಕಾರಣ ಇದು ಮುಂದಿನ ದಿನಗಳಲ್ಲಿ ತುಂಬಾ ಬೇಡಿಕೆ ಉಂಟಾಗುವ ಸಾಧ್ಯತೆ ಇದ್ದು, ನೀವು ಉತ್ತಮ ಮೈಲೇಜ್ ಬೈಕ್ ಕೊಳ್ಳಲು ಬಯಸಿದರೆ ಇದು ಒಂದು ಉತ್ತಮ ಆಯ್ಕೆ ಆಗಿರಲಿದೆ.

ಈ ಬೈಕ್ ನ ಇನ್ನಷ್ಟು ವಿವರ BAJAJ ನಲ್ಲಿ ನೋಡಬಹುದಾಗಿದ್ದು, ಅಥವಾ ನಿಮ್ಮ ಹತ್ತಿರದ ಬಜಾಜ್ ಶೋರೂಂ ಗಳಲ್ಲಿ ಪಡೆಯಬಹುದಾಗಿದೆ.

ಇದನ್ನೂ ಓದಿ : ಈ ಯೋಜನೆಯಲ್ಲಿ ರೂ.15,000 ಟೂಲ್ ಕಿಟ್, 3 ಲಕ್ಷ ಸಹಾಯಧನ ಪಡೆಯಿರಿ


Share this page
WhatsApp Group Join Now
Telegram Group Join Now