ಅನ್ನಭಾಗ್ಯ ಯೋಜನೆಯ ಜುಲೈ ತಿಂಗಳ ಹಣ ಬಿಡುಗಡೆ|Annabhagya July amount credited

Share this page

ಸ್ನೇಹಿತರೆ ಅನ್ನಭಾಗ್ಯ ಯೋಜನೆಯ ಜುಲೈ ತಿಂಗಳ ಹಣವು ಸರ್ಕಾರವು ಬಿಡುಗಡೆ ಮಾಡಿದ್ದು (Annabhagya July amount credited), ರಾಜ್ಯದ ಎಲ್ಲಾ ಬಿಪಿಎಲ್ (BPL) ಹಾಗೂ ಅಂತ್ಯೋದಯ (AAY) ಕಾರ್ಡುದಾರರ ಮುಖ್ಯಸ್ಥರ ಖಾತೆಗೆ ಹಣ ಜಮೆಯಾಗಿದೆ.

WhatsApp Group Join Now
Telegram Group Join Now

ಅನ್ನಭಾಗ್ಯ ಯೋಜನೆಯ ಜುಲೈ ಹಣ ಬಿಡುಗಡೆ (Annabhagya July amount credited) :

ಅನ್ನಭಾಗ್ಯ ಯೋಜನೆಯ ಜುಲೈ ತಿಂಗಳ ಹಣ ಬಿಡುಗಡೆ Annabhagya July amount credited
Annabhagya July amount credited

ಈ ಬಾರಿಯ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಲ್ಲಿ ಸರ್ಕಾರವು ಮೊದಲು ನೀಡಲಾಗುತ್ತಿದ್ದ 5ಕೆಜಿ ಅಕ್ಕಿ ಬದಲಿಗೆ 10ಕೆಜಿ ಅಕ್ಕಿಯನ್ನು ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ಉಚಿತವಾಗಿ ನೀಡುವುದೆಂದು ಘೋಷಿಸಿತ್ತು, ಆದರೆ ಅಕ್ಕಿಯ ಕೊರತೆಯ ಕಾರಣ 5ಕೆಜಿ ಗೆ ಬದಲಾಗಿ ಅದರ ಹಣವನ್ನು ಕುಟುಂಬದ ಮುಖ್ಯಸ್ಥನ ಖಾತೆಗೆ ಜಮೆ ಮಾಡುವುದೆಂದು ತಿಳಿಸಿತ್ತು.

ಸ್ವಯಂ ಉದ್ಯೋಗ ಮಾಡುವವರಿಗೆ 2ಲಕ್ಷ ರೂ. ಸಬ್ಸಿಡಿ ಸಾಲ ಸೌಲಭ್ಯ, ಇಲ್ಲದೆ ಅರ್ಜಿ ವಿಧಾನ Devaraj Urs subsidy loan scheme

ಅದರಂತೆ ರಾಜ್ಯ ಸರ್ಕಾರವು ಕೆಜಿಗೆ 34 ರೂಪಾಯಿಯಂತೆ 5ಕೆಜಿ ಅಕ್ಕಿಗೆ ಒಟ್ಟು 170 ರೂಪಾಯಿಯನ್ನು ಕಾರ್ಡ್ನಲ್ಲಿರುವ ಎಲ್ಲಾ ಸದಸ್ಯರಿಗೂ ನೀಡುತ್ತಿದ್ದು, ಎಲ್ಲಾ ಸದಸ್ಯನ ಒಟ್ಟು ಹಣವನ್ನು ಪಡಿತರ ಚೀಟಿಯಲ್ಲಿ ಮುಖ್ಯಸ್ಥನ ಖಾತೆಗೆ ಜಮೆ ಮಾಡಲಾಗುತ್ತಿದೆ.

ಇದರಂತೆ ಪ್ರತೀ ತಿಂಗಳು ರಾಜ್ಯಸರ್ಕಾರವು ಹಣವನ್ನು ಜಮೆ ಮಾಡುತ್ತಿದ್ದು,  ಈಗ ಜುಲೈ ತಿಂಗಳ ಹಣ ಕೂಡ ಬಿಡುಗಡೆ ಮಾಡಲಾಗಿದೆ.

ಈಗಾಗಲೇ ಜುಲೈ ತಿಂಗಳ ಹಣವನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ಪಡಿತರ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದ್ದು, ನೀವು ನಿಮ್ಮ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಚೆಕ್ ಮಾಡಿಕೊಳ್ಳ ಬಹುದಾಗಿದೆ.

ಬಾಕಿ ಇರುವ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ, ಸಿಎಂ ಸಿದ್ದರಾಮಯ್ಯ

ನಿಮಗೆ ಬಂದಿರುವ ಹಣವನ್ನು ಹೀಗೆ ಚೆಕ್ ಮಾಡಬಹುದು :

ಅನ್ನಭಾಗ್ಯ ಯೋಜನೆಯ ಹಣವು ಪಡಿತರ ಚೀಟಿಯಲ್ಲಿರುವ ಮುಖ್ಯ ಸದಸ್ಯನ ಖಾತೆಗೆ ಜಮೆಯಾಗಲಿದ್ದು, ಅವರ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ, ಆದ್ದರಿಂದ ನಿಮ್ಮ ಬ್ಯಾಂಕ್/ಪೋಸ್ಟಲ್ ಖಾತೆ ಪರಿಶೀಲಿಸಬಹುದಾಗಿದೆ.

ಇನ್ನು ನೀವು ಆಹಾರ ಇಲಾಖೆಯ ವೆಬ್ಸೈಟ್ ನಲ್ಲಿ ನಿಮ್ಮ ಪಡಿತರ ಕಾರ್ಡ್ ಸಂಖ್ಯೆ ದಾಖಲಿಸಿ ಪ್ರತೀ ತಿಂಗಳ ವಿವರ ನೋಡಬಹುದಾಗಿದೆ.

ನಿಮಗೆ ಬಂದಿರುವ ಅನ್ನಭಾಗ್ಯ ಹಣವನ್ನು ಇಲ್ಲಿ ಚೆಕ್ ಮಾಡಿ|annabhagya DBT amount check

ಇನ್ನು DBT Karnataka ಎನ್ನುವ ಆ್ಯಪ್ ಮೂಲಕವೂ ನಿಮ್ಮ ಮೊಬೈಲ್ ನಲ್ಲೆ ನಿಮಗೆ ಜಮೆಯಾಗಿರುವ ಹಣದ ವಿವರ ನೋಡಿಕೊಳ್ಳಬಹುದಾಗಿದೆ.

annabhagya dbt amount status on dbt karnataka application

ಈ ಒಂದು ಆ್ಯಪ್ ಇದ್ದರೆ ಸಾಕು, ಗೃಹಲಕ್ಷ್ಮಿ, ಅನ್ನಭಾಗ್ಯ ಸೇರಿದಂತೆ ಎಲ್ಲಾ ಯೋಜನೆಯ ಹಣದ ಮಾಹಿತಿ ಪಡೆಯಿರಿ : DBT Karnataka

ಇದನ್ನೂ ಓದಿ :

ಗೃಹಲಕ್ಷ್ಮಿ ಯೋಜನೆ ಸ್ಥಗಿತಗೊಂಡಿದೆಯೇ? ಜೂನ್- ಜುಲೈ ಹಣ ಯಾವಾಗ ಬರಲಿದೆ? ಇಲ್ಲಿದೆ ಮಾಹಿತಿ : Gruha lakshmi july update

ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ 5,000 ರೂ. ನೇರವಾಗಿ ಮಹಿಳೆಯರ ಖಾತೆಗೆ ಜಮೆ, Pradhan Mantri Matru Vandana yojana


Share this page
WhatsApp Group Join Now
Telegram Group Join Now

3 thoughts on “ಅನ್ನಭಾಗ್ಯ ಯೋಜನೆಯ ಜುಲೈ ತಿಂಗಳ ಹಣ ಬಿಡುಗಡೆ|Annabhagya July amount credited”

Leave a Comment