ನಿಮಗೆ ಬಂದಿರುವ ಅನ್ನಭಾಗ್ಯ ಹಣವನ್ನು ಇಲ್ಲಿ ಚೆಕ್ ಮಾಡಿ|annabhagya DBT amount check

Share this page

annabhagya DBT amount check: ಸ್ನೇಹಿತರೇ ನಮಸ್ಕಾರ, ನಿಮಗೆ ಅನ್ನಭಾಗ್ಯ ಯೋಜನೆಯ ಹಣ ಬರುತ್ತಿದೆಯೇ? ನಿಮಗೆ ಬಂದಿರುವ ಅನ್ನಭಾಗ್ಯ ಹಣದ ವಿವರ ತಿಳಿಯಬೇಕೇ? ಒಂದುವೇಳೆ ಬಂದಿಲ್ಲವೆಂದಾದರೆ ಅದರ ಕಾರಣ ತಿಳಿಯಬೇಕೇ? ಹಾಗಾದರೆ ಈ ಲೇಖನ ತಪ್ಪದೆ ಓದಿ.

WhatsApp Group Join Now
Telegram Group Join Now

ಅನ್ನಭಾಗ್ಯ ಯೋಜನೆಯ ಹಣದ ವಿವರ ಹೀಗೆ ಚೆಕ್ ಮಾಡಿ annabhagya DBT amount check:

ಕರ್ನಾಟಕ ಸರ್ಕಾರದ ಅನ್ನಭಾಗ್ಯ ಯೋಜನೆಯಡಿಯಲ್ಲಿ ಬಿಪಿಎಲ್ ಕಾರ್ಡುದಾರರ ಮುಖ್ಯ ಸದಸ್ಯನ ಖಾತೆಗೆ ಪ್ರತೀ ತಿಂಗಳು ಡಿಬಿಟಿ ಮೂಲಕ ನೇರವಾಗಿ ಹಣ ಜಮೆಯಾಗುತ್ತಿದ್ದು, ನಿಮಗೆ ಇದುವರೆಗೆ ಜಮೆಯಾಗಿರುವ ಹಣದ ವಿವರವನ್ನು ಎರಡು ವಿಧಾನದ ಮೂಲಕ ಚೆಕ್ ಮಾಡಿಕೊಳ್ಳಬಹುದಾಗಿದೆ, ಮೊದಲನೇ ವಿಧಾನದಲ್ಲಿ ಆಹಾರ ಇಲಾಖೆಯ ವೆಬ್ಸೈಟ್ ಮೂಲಕ ಚೆಕ್ ಮಾಡಬೇಕಾಗಿದ್ದು, ಇದರಲ್ಲಿ ನಿಮಗೆ ಒಂದುವೇಳೆ ಹಣ ಸ್ಥಗಿತಗೊಂಡಿದ್ದಲ್ಲಿ ಅದರ ಕಾರಣವನ್ನು ತಿಳಿದುಕೊಳ್ಳಬಹುದಾಗಿದೆ.

ವಿಧಾನ 1 (annabhagya DBT amount check) :

ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ,  ಇ – ಸೇವೆಗಳ ಆಯ್ಕೆಯಲ್ಲಿ, DBT Status ಆಯ್ಕೆ ಸೆಲೆಕ್ಟ್ ಮಾಡಿ, ಅಥವಾ ನಾವು ಕೆಳಗೆ ನೀಡಿರುವ ನೇರ ಲಿಂಕ್ ಕ್ಲಿಕ್ ಮಾಡಿ.

CLICK HERE

ಇಲ್ಲಿ 3 ಸರ್ವರ್ ಆಯ್ಕೆ ಇರಲಿದ್ದು, ಯಾವ ಸರ್ವರ್ ನಲ್ಲಿ ನಿಮ್ಮ ಜಿಲ್ಲೆ ಇದೆಯೋ ಅಲ್ಲಿ ಕ್ಲಿಕ್ ಮಾಡಿ.

ನಂತರ ನಿಮ್ಮ ಡಿಬಿಟಿ ವಿವರಗಳಿಗಾಗಿ, ನೇರ ನಗದು ವರ್ಗಾವಣೆಯ ಸ್ಥಿತಿ(DBT) ಆಯ್ಕೆ ಇರಲಿದ್ದು ಅಲ್ಲಿ ಕ್ಲಿಕ್ ಮಾಡಿ, ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ದಾಖಲಿಸಿ, ವರ್ಷ ಆಯ್ಕೆ ಮಾಡಿ, ನೀವು ನೋಡಬೇಕಾದ ತಿಂಗಳು ಆಯ್ಕೆ ಮಾಡಿ, ಈಗ ನಿಮಗೆ ಆ ತಿಂಗಳ ಹಣ ಪಾವತಿಯ ವಿವರ ಸಿಗಲಿದೆ.

annabhagya DBT amount check

ವಿಧಾನ 2 :

ನಿಮ್ಮ ಮೊಬೈಲ್ ಮೂಲಕ DBT karnataka App ಡೌನ್ಲೋಡ್ ಮಾಡಿ ನಿಮಗೆ ಹಣ ಜಮೆಯಾಗಿರುವ ವಿವರವನ್ನು ಚೆಕ್ ಮಾಡಬಹುದಾಗಿದೆ, ಇದರ ವಿವರಕ್ಕಾಗಿ ಕೆಳಗಿನ ಲೇಖನ ಓದಿ (annabhagya DBT amount check)

ಈ ಒಂದು ಆ್ಯಪ್ ಇದ್ದರೆ ಗೃಹಲಕ್ಷ್ಮಿ, ಅನ್ನಭಾಗ್ಯ ಸೇರಿದಂತೆ ಎಲ್ಲಾ ಯೋಜನೆಯ ಹಣದ ಮಾಹಿತಿ ಪಡೆಯಿರಿ : DBT Karnataka

ಅನ್ನಭಾಗ್ಯ ಯೋಜನೆಯ ಹಣ :

ಕರ್ನಾಟಕ ಸರ್ಕಾರದ ಅನ್ನಭಾಗ್ಯ ಯೋಜನೆಯಲ್ಲಿ ಬಿಪಿಎಲ್ ಕಾರ್ಡುದಾರರ ಪ್ರತೀ ಸದಸ್ಯನಿಗೆ 175 ರೂ. ನಂತೆ ಎಲ್ಲ ಸದಸ್ಯರ ಒಟ್ಟು ಹಣವನ್ನು ನೇರವಾಗಿ ಮುಖ್ಯ ಸದಸ್ಯನ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದ್ದು, ಪ್ರತೀ ತಿಂಗಳು ಈ ಹಣ ಖಾತೆಗೆ ಜಮೆಯಾಗುತ್ತಿದೆ

ನಿಮಗೆ ಹಣ ಜಮೆಯಾಗುತ್ತಿಲ್ಲವೇ?

ಇನ್ನು ಕೆಲವರು ಕಳೆದ ಕೆಲವು ತಿಂಗಳುಗಳಿಂದ ಜನ ಜಮೆಯಾಗುತ್ತಿಲ್ಲ ಏನು ಹೇಳುತ್ತಿದ್ದು, ಮೇಲೆ ವಿಧಾನ 1 ರಲ್ಲಿ ತಿಳಿಸಿರುವ ವಿಧಾನದ ಮೂಲಕ ಚೆಕ್ ಮಾಡಿಕೊಳ್ಳಿ, ಅಲ್ಲಿ ನೀವು ಪರಿಶೀಲಿಸಿದ ತಿಂಗಳಲ್ಲಿ processing ಎಂದು ಇದ್ದಲ್ಲಿ ನಿಮ್ಮ ಖಾತೆಗೆ ಹಣ ಜಮೆಯಾಗಿಲಿದೆ, ಲೋಕಸಭೆಯ ಚುನಾವಣೆ ಬಳಿಕ ಹಣ ವರ್ಗಾವಣೆ ಸ್ಥಗಿತಗೊಂಡಿದ್ದು, ಹಂತ ಹಂತವಾಗಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಇನ್ನು ನೀವು ಚೆಕ್ ಮಾಡಿದ ಸಂದರ್ಭದಲ್ಲಿ payment failed ಎಂದು ತೋರಿಸಿದ್ದಲ್ಲಿ, ನಿಮಗೆ ಹಣ ಜಮೆಯಾಗುವುದಿಲ್ಲ, ಅದರ ಕಾರಣ ತಿಳಿದು ಸರಿಪಡಿಸಿಕೊಳ್ಳಿ.

ಇಲ್ಲಿದೆ ಕಾರಣ ಹಾಗೂ ಪರಿಹಾರ:

ನಿಮಗೆ ಅನ್ನಭಾಗ್ಯ ಹಣ ಬರುತ್ತಿಲ್ಲವೇ? ಹಾಗಾದರೆ ತಕ್ಷಣ ಈ ಕೆಲಸ ಮಾಡಿ : annabhagya amount not recived

ನಿಮ್ಮ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಆಗಲಿದೆ? ಸರ್ಕಾರದ ಖಡಕ್ ನಿರ್ಧಾರ | BPL Card Cancellation

ಕಾರ್ಮಿಕರ ಮಕ್ಕಳಿಗೆ ರೂ.25,000 ರವರೆಗೆ ಸ್ಕಾಲರ್ಷಿಪ್ ಪಡೆಯಲು ಅರ್ಜಿ ಸಲ್ಲಿಸಿ: NSP Scholarship 2024

ಮಣಿಪಾಲ ಆರೋಗ್ಯಕಾರ್ಡ್ ನೋಂದಣಿ ಆರಂಭ, ಇಲ್ಲಿದೆ ಶುಲ್ಕ ಹಾಗೂ ಅರ್ಜಿ ವಿವರ : Manipal Arogya Card 2024

ಇದೇ ರೀತಿಯ ಇನ್ನಷ್ಟು ಮಾಹಿತಿಗಳನ್ನು ತಕ್ಷಣ ಪಡೆಯಲು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ.


Share this page
WhatsApp Group Join Now
Telegram Group Join Now

6 thoughts on “ನಿಮಗೆ ಬಂದಿರುವ ಅನ್ನಭಾಗ್ಯ ಹಣವನ್ನು ಇಲ್ಲಿ ಚೆಕ್ ಮಾಡಿ|annabhagya DBT amount check”

Leave a Comment