ನಿಮ್ಮ ಆಧಾರ್ ಕಾರ್ಡ್ ಹೀಗೆ ತಕ್ಷಣ ಡೌನ್ಲೋಡ್ ಮಾಡಿರಿ : Aadhaar card download

Share this page

Aadhaar card download: ಸ್ನೇಹಿತರೇ, ನಿಮ್ಮ ಆಧಾರ್ ಕಾರ್ಡನ್ನು ನೀವು ನಿಮ್ಮ ಮೋಬೈಲ್ ನಲ್ಲೆ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದ್ದು, ನೀವೂ ಹೇಗೆ ಡೌನ್ಲೋಡ್ ಮಾಡಬಹುದೆಂದು ಈ ಕೆಳಗೆ ವಿವರ ನೀಡಲಾಗಿದೆ.

WhatsApp Group Join Now
Telegram Group Join Now

ಆಧಾರ್ ಕಾರ್ಡ್ Aadhaar card download :

ನಿಮಗೆಲ್ಲಾ ತಿಳಿದೇ ಇದೆ ಸದ್ಯ ಭಾರತದ ನಾಗರಿಕರ ಪ್ರಮುಖ ಗುರುತಿನ ಚೀಟಿಯಾಗಿ ಈ ಆಧಾರ್ ಕಾರ್ಡ್ ಬಳಸಲಾಗುತ್ತಿದ್ದು, ಪ್ರತಿಯೊಬ್ಬ ನಾಗರಿಕನೂ ಆತನ ಆಧಾರ್ ಕಾರ್ಡ್ ಹೊಂದಿರಬೇಕು ಹಾಗೂ ಪ್ರತಿಯೊಂದು ವ್ಯವಹಾರಗಳಿಗೂ ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ, ಆಧಾರ್ ಶ್ರೀ ಸಾಮಾನ್ಯನ ಅಧಿಕಾರವಾಗಿದ್ದು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಮೂಲಕ ಪ್ರತಿಯೊಬ್ಬ ಭಾರತದ ಪ್ರಜೆಯೂ ಈ ಆಧಾರ್ ಕಾರ್ಡ್ ಹೊಂದಿರಬೇಕಾಗಿರುತ್ತದೆ, ಇದರಲ್ಲಿ 12 ಅಂಕೆಗಳ ಆಧಾರ್ ಸಂಖ್ಯೆ ಇರಲಿದ್ದು, ಇದು ನಿಮ್ಮ ಆದಾರ್ ಗುರುತಿನ ಸಂಖ್ಯೆ ಆಗಿರುತ್ತದೆ.

ನೀವು ನಿಮ್ಮ ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಬಹುದಾಗಿದ್ದು, ಈ ಕೆಳಗಿನ ವಿಧಾನದ ಮೂಲಕ ಮಾಡಿಕೊಳ್ಳಿ.

Aadhaar card download ಮಾಡುವ ವಿಧಾನ :

ಮೊದಲಿಗೆ UIDAI – ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ ವೆಬ್ಸೈಟ್ (https://uidai.gov.in) ಗೆ ಭೇಟಿ ನೀಡಿ ಅಥವಾ ಈ ಕೆಳಗಿನ eAadhaar Download ನೇರ ಲಿಂಕ್ ಗೆ ಭೇಟಿ ನೀಡಿ.

ಇಲ್ಲಿ ನಿಮ್ಮ ಆಧಾರ್ ಸಂಖ್ಯೆ ದಾಖಲಿಸಿ, ಕೊಟ್ಟಿರುವ Captcha ದಾಖಲಿಸಿ, Send OTP ಮೇಲೆ ಕ್ಲಿಕ್ ಮಾಡಿ.

Aadhaar card download : ನಿಮ್ಮ ಆಧಾರ್ ಸಂಖ್ಯೆ ದಾಖಲಿಸಿ

ಈಗ ನಿಮಗೆ ನಿಮ್ಮ ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಬರಲಿದ್ದು ಅದನ್ನು ದಾಖಲಿಸಿ Verify and Download ಮೇಲೆ ಕ್ಲಿಕ್ ಮಾಡಿ.

ಈಗ ನಿಮ್ಮ ಆಧಾರ್ ಕಾರ್ಡ್ ಡೌನ್ಲೋಡ್ / ಸೇವ್ ಆಗಲಿದೆ.

Aadhaar card download

ಇದು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ PDF ಫೈಲ್ ರೂಪದಲ್ಲಿ ಸೇವ್ ಆಗಿರಲಿದ್ದು, ಪಾಸ್ವರ್ಡ್ ದಾಖಲಿಸಿ ಓಪನ್ ಮಾಡಬೇಕು, ಪಾಸ್ವರ್ಡ್ ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರ ಹಾಗೂ ನಿಮ್ಮ ಜನ್ಮ ದಿನಾಂಕದ ಇಸವಿ ಒಟ್ಟಿಗೆ ದಾಖಲಿಸಬೇಕು.

ಉದಾಹರಣೆಗೆ ನಿಮ್ಮ ಹೆಸರು MAHESH ಹಾಗೂ ನಿಮ್ಮ ಜನ್ಮ ಇಸವಿ 1990 ಆಗಿದ್ದಲ್ಲಿ ನೀವು ಕ್ಯಾಪಿಟಲ್ ಲೆಟರ್ ನಲ್ಲಿ MAHE1990 ಎಂದು ದಾಖಲಿಸಿ submit ಕೊಟ್ಟರೆ ನಿಮ್ಮ ಆಧಾರ್ ಕಾರ್ಡ್ ತೋರಿಸಲಿದೆ, ಅದು ನಿಮ್ಮ ಅಧಿಕೃತ ಆಧಾರ್ ಕಾರ್ಡ್ ಆಗಿರಲಿದ್ದು, ಒಂದು ವೇಳೆ ನಿಮ್ಮ ಆಧಾರ್ ಕಳೆದು ಹೋದಲ್ಲಿ ಅಥವಾ ಆಧಾರ್ ಪ್ರತಿ ಬೇಕಿದ್ದಲ್ಲಿ ಇದರ ಪ್ರತಿ ಉಪಯೋಗಿಸಬಹುದಾಗಿದೆ.

ಎಚ್ಚರಿಕೆ : ನಿಮ್ಮ ಆಧಾರ್ ಕಾರ್ಡ್ ಎಲ್ಲೆಂದರಲ್ಲಿ ಕಳುಹಿಸಬೇಡಿ, ಹಾಗೂ ಬೇರೆಯವರಿಗೆ ಆಧಾರ್ OTP ನೀಡಬೇಡಿ ಹಾಗೂ ನಿಮ್ಮ ಆಧಾರ್ ಅನ್ನು ಅಗತ್ಯವಿರುವಲ್ಲಿ ಮಾತ್ರ ನೀಡಿ, ಅಗತ್ಯವಿದ್ದಲ್ಲಿ ಮಾತ್ರ ಆಧಾರ್ ಡೌನ್ಲೋಡ್ ಮಾಡಿ, ನಮ್ಮ ಎಲ್ಲಾ ಬ್ಯಾಂಕ್ ಖಾತೆಗಳು ಆಧಾರ್ ಲಿಂಕ್ ಆಗಿರುವ ಕಾರಣ ನಿಮ್ಮ ಆಧಾರ್ ಬಳಸಿ ವಂಚಕರು ನಿಮ್ಮ ಖಾತೆಯಲ್ಲಿರುವ ಹಣ ಲಪಟಾಯಿಸುವ ಸಾಧ್ಯತೆ ಇರುತ್ತದೆ, ಅದ್ದರಿಂದ ಯಾವುದೇ ಕಾರಣಕ್ಕೂ ಅಪರಿಚಿತ ಫೋನ್ ಕರೆಯಲ್ಲಿ OTP ನೀಡಬೇಡಿ.

ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ಇತರರಿಗೂ ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ.

ಇದನ್ನೂ ಓದಿ :

120 ಕಿಮೀ ಮೈಲೇಜ್ ನೀಡುವ 95 ಸಾವಿರ ಬೆಲೆಯ ಮೊದಲ ಸಿಎನ್‌ಜಿ ಬೈಕ್ ಬಿಡುಗಡೆ

ಈ ಯೋಜನೆಯಲ್ಲಿ ರೂ.15,000 ಟೂಲ್ ಕಿಟ್, 3 ಲಕ್ಷ ಸಹಾಯಧನ ಪಡೆಯಿರಿ


Share this page
WhatsApp Group Join Now
Telegram Group Join Now