ರಾಜ್ಯದಲ್ಲಿ ಇನ್ನೂ 8 ದಿನಗಳ ಕಾಲ ಭಾರಿ ಮಳೆ, ಈ ಜಿಲ್ಲೆಗಳಲ್ಲಿ ಹೈ ಅಲರ್ಟ್! Rain alert August

Share this page

Rain alert August 2024: ರಾಜ್ಯ ಹವಾಮಾನ ಇಲಾಖೆಯ ವರದಿಯಂತೆ ರಾಜ್ಯದಲ್ಲಿ ಆಗಸ್ಟ್ 8 ರ ತನಕ ಇದೇ ರೀತಿಯಾಗಿ ಭಾರೀ ಮಳೆ ಮುಂದುವರಿಯಲಿದ್ದು, ರಾಜ್ಯದ ಕೆಲವು ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ.

WhatsApp Group Join Now
Telegram Group Join Now

ಆಗಸ್ಟ್ 8 ರ ತನಕ ಭಾರೀ ಮಳೆ (Rain alert August 2024) !

ರಾಜ್ಯದಲ್ಲಿ ಇನ್ನೂ 8 ದಿನಗಳ ಕಾಲ ಭಾರಿ ಮಳೆ, ಈ ಜಿಲ್ಲೆಗಳಲ್ಲಿ ಹೈ ಅಲರ್ಟ್! Rain alert August
heavy rain alert in karnataka

ರಾಜ್ಯದಲ್ಲಿ ಈ ಬಾರಿ ಭರ್ಜರಿ ಮಳೆಯಾಗುತ್ತಿದ್ದು, ಕಳೆದ ಎರಡು ದಿನಗಳ ಸ್ವಲ್ಪ ಕಮ್ಮಿಯಾದಂತೆ ಕಂಡರೂ ಈ ಮತ್ತೆ ವರುಣನ ಆರ್ಭಟ ಶುರುವಾಗಿದೆ, ಹವಾಮಾನ ಇಲಾಖೆಯ ವರದಿಯಂತೆ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಇನ್ನೂ 8 ದಿನಗಳ ಕಾಲ ಇದೇ ರೀತಿಯಾಗಿ ಮಳೆ ಅಬ್ಬರಿಸಲಿದೆ.

ಪಹಣಿ ಆಧಾರ್ ಲಿಂಕ್ ಮಾಡಲು ಮತ್ತೆ 5 ದಿನ ಅವಕಾಶ RTC aadhaar link last date extended 

ರಾಜ್ಯದ ಕರಾವಳಿ ಭಾಗಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಮುಂದಿನ 3 ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಭಾರೀ ಮಳೆಯಾಗಲಿದೆ.

ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದ್ದು ಭಾರಿ ಮಳೆಯಾಗಲಿದೆ, ಇನ್ನು ಬೀದರ್, ಗದಗ್, ಹಾವೇರಿ, ದಾರವಾಡ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆಗಳಲ್ಲಿ ಸಾದಾರಣ ಮಳೆ ಬೀಳಲಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಾದ  ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಭಾಗದಲ್ಲೂ ಸಾದಾರಣ ಮಳೆ ಮುಂದುವರಿಯವ ಸೂಚನೆಯಿದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ, ಮಲೆನಾಡು ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಬಾರೀ ಮಳೆ ಮುಂದುವರಿಯಲಿದ್ದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ.

weather forecast for Karnataka
weather forecast for Karnataka

ಮಳೆಯ ಅಬ್ಬರಕ್ಕೆ ತತ್ತರಿಸಿದ ಜನತೆ

ಈಗಾಗಲೇ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ರಾಜ್ಯದ ಬಹುತೇಕ ಎಲ್ಲಾ ನದಿ, ಹಳ್ಳಗಳು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶದಲ್ಲಿ ಪ್ರವಾಹದ ಸನ್ನಿವೇಶ ಎದುರಾಗಿದೆ, ಇನ್ನು ಕರಾವಳಿ ಭಾಗದಲ್ಲಿ ಸಮುದ್ರದ ಅಬ್ಬರದ ಅಲೆಗಳು ಭೋರ್ಗ್ಹೆರೆಯುತ್ತಿದೆ, ಇನ್ನು ಮಲೆನಾಡು ಘಾಟ್ ಹಾಗೂ ಕರಾವಳಿ ಭಾಗದಲ್ಲಿ ಭೂಕುಸಿತ ಸಂಭವಿಸಿದ್ದು, ಹಲವಾರು ಕಡೆಗಳಲ್ಲಿ ರಸ್ತೆ, ಸೇತುವೆ, ಮನೆಗಳು ಸೇರಿದಂತೆ ಅನೇಕರು ಮಣ್ಣುಪಾಲಾಗಿದ್ದು, ಅನೇಕ ಸಾವು ನೋವಿನ ಜೊತೆಗೆ ಈ ಬಾರಿ ಅಪಾರ ಪ್ರಮಾಣ ಮಳೆಯಿಂದ ಜನರ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.

ಎಚ್ಚರಿಕೆಯಿಂದ ಇರುವಂತೆ ಜನರಿಗೆ ಸೂಚನೆ (Rain alert August)

ನಿರಂತರ ಭಾರೀ ಮಳೆಯಿಂದಾಗಿ ಎಲ್ಲಾ ಕಡೆ ಭೂ ಕುಸಿತ ಘಟನೆಗಳ ಸಂಭವನೀಯತೆ ಹೆಚ್ಚಾಗಿರುತ್ತದೆ, ದಯವಿಟ್ಟು ಹೆಚ್ಚಿನ ಇಳಿಜಾರು ಪ್ರದೇಶಗಳಿಂದ ದೂರವಿರಲು ಮತ್ತು ಭೂಮಿ ಬಾಯ್ಬಿಟ್ಟ ಪ್ರದೇಶದಲ್ಲಿ, ಮರವಿರುವ ಪ್ರದೇಶದಿಂದ ದೂರವಿರಲು ಹಾಗೂ ಎಚ್ಚರಿಕೆಯಿಂದಿರುವಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSNDMC) ಜನರಿಗೆ ಸೂಚಿಸಿದೆ.

ಗೃಹಲಕ್ಷ್ಮಿ ಯೋಜನೆ ಸ್ಥಗಿತಗೊಂಡಿದೆಯೇ? ಜೂನ್- ಜುಲೈ ಹಣ ಯಾವಾಗ ಬರಲಿದೆ? ಇಲ್ಲಿದೆ ಮಾಹಿತಿ : Gruha lakshmi july update

ಅನ್ನಭಾಗ್ಯ ಯೋಜನೆಯಲ್ಲಿ ಮನೆಯ ಪ್ರತೀ ಸದಸ್ಯನಿಗೂ ತಿಂಗಳಿಗೆ 170 ರೂ. ಸಿಗಲಿದೆ | Annabhagya yojane 2024

ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ 5,000 ರೂ. ನೇರವಾಗಿ ಮಹಿಳೆಯರ ಖಾತೆಗೆ ಜಮೆ, Pradhan Mantri Matru Vandana yojana


Share this page
WhatsApp Group Join Now
Telegram Group Join Now

3 thoughts on “ರಾಜ್ಯದಲ್ಲಿ ಇನ್ನೂ 8 ದಿನಗಳ ಕಾಲ ಭಾರಿ ಮಳೆ, ಈ ಜಿಲ್ಲೆಗಳಲ್ಲಿ ಹೈ ಅಲರ್ಟ್! Rain alert August”

Leave a Comment