ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ ಬಿಡುಗಡೆ, ಈ ಪಟ್ಟಿಯಲ್ಲಿದರೆ ನಿಮ್ಮ ಹೆಸರಿದ್ದರೆ ಮಾತ್ರ ಹಣ ಜಮೆ : PM kisan 18th installment Beneficiary List

Share this page

PM kisan 18th installment Beneficiary List: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 18ನೇ ಕಂತಿನ ಹಣ ಬಿಡುಗಡೆಯಾಗಲಿರುವ ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆಯಾಗಿದ್ದು, ಈ ಪಟ್ಟಿ (Beneficiary List) ಯಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮಗೆ ಈ ಬಾರಿಯ 18ನೇ ಕಂತಿನ ಹಣವು ಜಮೆಯಾಗಲಿದೆ.

WhatsApp Group Join Now
Telegram Group Join Now

ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ (PM kisan 18th installment Beneficiary List)

ಪಿಎಂ ಕಿಸಾನ್ ಯೋಜನೆಯಲ್ಲಿ ಈಗಾಗಲೇ 17 ಕಂತುಗಳಲ್ಲಿ ರೈತರಿಗೆ 2000ರೂ. ನೇರವಾಗಿ ಖಾತೆಗೆ ಜಮೆ ಮಾಡಲಾಗಿದ್ದು, ಇನ್ನೇನು ರೈತರು 18 ನೇಯ ಕಂತಿನ ನಿರೀಕ್ಷೆಯಲ್ಲಿದ್ದು, ಈ ಬಾರಿ 18ನೇ ಕಂತಿನ ಅರ್ಹ ಫಲಾನುಭವಿಗಳ ಪಟ್ಟಿ  ಬಿಡುಗಡೆ ಮಾಡಿದ್ದಾರೆ, ಒಂದು ವೇಳೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದಲ್ಲಿ ನಿಮಗೆ ಪಿಎಂ ಕಿಸಾನ್ ನ 18ನೇ ಕಂತಿನ ಹಣ ಬರುವುದಿಲ್ಲ.

ಈ ಕಾರಣದಿಂದ ನೀವು ಅನರ್ಹರಾಗಿರಬಹುದು (PM kisan 18th installment Beneficiary List):

ಪಿಎಂ ಕಿಸಾನ್ ಯೋಜನೆಯಲ್ಲಿ ಅಕ್ರಮಗಳನ್ನು ತಡೆಗಟ್ಟಲು ಕೆಲವು ಬದಲಾವಣೆ ಮಾಡಲಾಗಿದ್ದು, ಅರ್ಹರಿಗೆ ಮಾತ್ರ ಈ ಯೋಜನೆಯ ಲಾಭ ದೊರೆಯುವಂತೆ ಮಾಡಲಾಗುತ್ತಿದೆ, ಮುಖ್ಯವಾಗಿ ಒಬ್ಬರು ಒಂದಕ್ಕಿಂತ ಹೆಚ್ಚು ಅಥವಾ ಅನರ್ಹರು ಈ ಯೋಜನೆಯ ಲಾಭ ಪಡೆಯದಂತೆ ಎಲ್ಲಾ ಪಿಎಂ ಕಿಸಾನ್ ಫಲಾನುಭವಿಗಳಿಗೆ ಇ-ಕೆವೈಸಿ (eKYC) ಮಾಡುವಂತೆ ತಿಳಿಸಲಾಗಿತ್ತು, ಒಂದುವೇಳೆ ನೀವು eKYC ಮಾಡದೇ ಇದ್ದಲ್ಲಿ ನಿಮಗೆ ಹಣ ಬರುವುದಿಲ್ಲ.

ಇನ್ನು ನಿಮ್ಮ ಖಾತೆಯಲ್ಲಿ ಏನಾದರೂ ಬದಲಾವಣೆಯಾಗಿದ್ದರೆ, ನಿಮ್ಮ ಆಧಾರ್ ಅಥವಾ ಜಮೀನಿನ ಪಹಣಿ (RTC) ಯಲ್ಲಿ ಬದಲಾವಣೆಯಾಗಿದ್ದಲ್ಲಿ, ನಿಮ್ಮ ಆಧಾರ್ ಜೊತೆ ಬ್ಯಾಂಕ್ ಖಾತೆ ಜೋಡಣೆಯಾಗದೆ ಇದ್ದಲ್ಲಿ ಈ ಕಾರಣಗಳಿಗಾಗಿ ನೀವು ಅನರ್ಹರಾಗಿರಬಹುದು.

ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯನ್ನು ಇಲ್ಲಿ ಚೆಕ್ ಮಾಡಿ (Beneficiary List)

ಪಿಎಂ ಕಿಸಾನ್ ಯೋಜನೆಯ ಬೆನಿಫಿಷಿಯರಿ ಲಿಸ್ಟ್ ಅನ್ನು ನೀವು ನೋಡಲು ನೀವು ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ https://pmkisan.gov.in ಗೆ ಭೇಟಿ ನೀಡಬೇಕು.

ಇಲ್ಲಿ ನೀವು formers corner ನಲ್ಲಿ Beneficiary List ಆಯ್ಕೆ ಮಾಡಿ.

PM Kisan Beneficiary list

ನಂತರ ನಿಮ್ಮ ರಾಜ್ಯ, ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿ GET REPORT ಆಯ್ಕೆ ಮೇಲೆ ಕ್ಲಿಕ್ ಮಾಡಿ.

pm kisan beneficiary list check

ಈಗ ನಿಮ್ಮ ಮುಂದೆ ನಿಮ್ಮ ಗ್ರಾಮದ ಫಲಾನುಭವಿಗಳ ಪಟ್ಟಿ ಕಾಣಿಸಲಿದ್ದು, ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದಲ್ಲಿ ನಿಮ್ಮ ಖಾತೆಗೆ 18ನೇ ಕಂತಿನ ಹಣ ಜಮೆಯಾಗಲಿದೆ,

pm kisan beneficiary list village wise ಫಲಾನುಭವಿಗಳ ಪಟ್ಟಿ

ಒಂದು ವೇಳೆ ಇಲ್ಲದಿದ್ದಲ್ಲಿ ಮೇಲೆ ನೀಡಿರುವ ಕಾರಣದಿಂದ ಅನರ್ಹವಾಗಿರಬಹುದು, ತಕ್ಷಣ ತಪ್ಪುಗಳನ್ನು ಸರಿಪಡಿಸಿಕೊಂಡು ನಿಮ್ಮ ಹತ್ತಿರದ ಕೃಷಿ ಕೇಂದ್ರಕ್ಕೆ ಭೇಟಿ ನೀಡಿ ಸರಿಪಡಿಸಿಕೊಳ್ಳಿ.

ಇದನ್ನೂ ಓದಿ :

ಪಿಎಂ ಕಿಸಾನ್ ಯೋಜನೆಯಲ್ಲಿ 6,000 ರೂ. ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ: PM Kisan Samman Nidhi Scheme

PM Awas Yojana 2024: ಪಿಎಂ ಆವಾಸ್ ಯೋಜನೆಯಲ್ಲಿ ಉಚಿತ ಮನೆ ಅಥವಾ ಹೋಮ್ ಲೋನ್ ಪಡೆಯಲು ಅರ್ಜಿ ಸಲ್ಲಿಸಿ


Share this page
WhatsApp Group Join Now
Telegram Group Join Now

2 thoughts on “ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ ಬಿಡುಗಡೆ, ಈ ಪಟ್ಟಿಯಲ್ಲಿದರೆ ನಿಮ್ಮ ಹೆಸರಿದ್ದರೆ ಮಾತ್ರ ಹಣ ಜಮೆ : PM kisan 18th installment Beneficiary List”

Leave a Comment