ಅನ್ನಭಾಗ್ಯ ಯೋಜನೆಯಲ್ಲಿ ಮನೆಯ ಪ್ರತೀ ಸದಸ್ಯನಿಗೂ ತಿಂಗಳಿಗೆ 170 ರೂ. ಸಿಗಲಿದೆ | Annabhagya yojane 2024

Share this page

ಅನ್ನಭಾಗ್ಯ ಯೋಜನೆ (Annabhagya yojane): ಈ ಯೋಜನಯಡಿಯಲ್ಲಿ ಕರ್ನಾಟಕದ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತೀ ಸದಸ್ಯನಿಗೆ ಪ್ರತೀ ತಿಂಗಳು 170 ರೂ. ಸಿಗಲಿದೆ, ಈ ಯೋಜನೆಯ ಬಗ್ಗೆ ಹಾಗೂ ಹಣ ಜಮೆಯಾಗುವ ವಿವರ ಈ ಕೆಳಗೆ ನೀಡಲಾಗಿದೆ.

WhatsApp Group Join Now
Telegram Group Join Now

ಅನ್ನಭಾಗ್ಯ ಯೋಜನೆ Annabhagya Yojane :

ಕರ್ನಾಟಕ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆ ರೂಪಿಸಿದ್ದು, ಈ ಯೋಜನೆಯಲ್ಲಿ ಬಿಪಿಎಲ್ (BPL) ಹಾಗೂ ಅಂತ್ಯೋದಯ ಕಾರ್ಡ್ ಕುಟುಂಬಗಳಿಗೆ ಉಚಿತ ಅಕ್ಕಿ ಹಾಗೂ ಇತರ ಧಾನ್ಯಗಳನ್ನು ವಿತರಿಸುತ್ತಿದೆ.

ಅನ್ನಭಾಗ್ಯ ಯೋಜನೆಯಲ್ಲಿ ಮನೆಯ ಪ್ರತೀ ಸದಸ್ಯನಿಗೂ ತಿಂಗಳಿಗೆ 170 ರೂ. ಸಿಗಲಿದೆ | Annabhagya yojane
Annabhagya yojane

ಈ ಬಾರಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡುದಾರರಿಗೆ ಈಗಾಗಲೇ 5kg ನೀಡಲಾಗುತ್ತಿರುವ ಅಕ್ಕಿಯನ್ನು 10ಕೆಜಿ ನೀಡುವುದಾಗಿ ಘೋಷಿಸಿತ್ತು, ಆದರೆ ಈ ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿತು, ಇದರಿಂದ ಅಕ್ಕಿಯ ಕೊರತೆಯನ್ನು ನೀಗಿಸಲು ರಾಜ್ಯ ಸರ್ಕಾರವು ಈ 5 ಕೆ.ಜಿ ಹೆಚ್ಚುವರಿ ಅಕ್ಕಿಯ ಬದಲಿಗೆ ಹಣ ನೀಡುವುದಾಗಿ ತಿಳಿಸಿತು.

ಕುಟುಂಬದ ಪ್ರತೀ ಸದಸ್ಯನಿಗೂ 170 ರೂ. ತಿಂಗಳಿಗೆ ಜಮೆ (Annabhagya Yojane) :

ಅನ್ನಭಾಗ್ಯ ಯೋಜನೆ Annabhagya Yojane
ಅನ್ನಭಾಗ್ಯ ಯೋಜನೆ Annabhagya Yojane

ರಾಜ್ಯ ಸರ್ಕಾರವು 5 ಕೆಜಿ ಹೆಚ್ಚುವರಿ ಅಕ್ಕಿಯ ಬದಲಿಗೆ ಕೆಜಿಗೆ ತಲಾ 34 ರೂ. ನಂತೆ ಒಟ್ಟು 5 ಕೆಜಿಗೆ ಪ್ರತೀ ಸದಸ್ಯನಿಗೆ 170 ರೂ. ನೀಡುವ ನಿರ್ಧಾರ ಕೈಗೊಂಡು ಕಾರ್ಡಿನ ಎಲ್ಲಾ ಸದಸ್ಯರ ಒಟ್ಟು ಹಣವನ್ನು ಕಾರ್ಡಿನ ಮುಖ್ಯ ಸದಸ್ಯನ ಖಾತೆಗೆ ಜಮೆ ಮಾಡುತ್ತಿದೆ.

ಉದಾಹರಣೆಗೆ ಈಗ ನಿಮ್ಮ ರೇಷನ್ ಕಾರ್ಡ್ ನಲ್ಲಿ ಒಟ್ಟು 5 ಸದಸ್ಯರಿದ್ದಲ್ಲಿ ಮನೆಯ ಮುಖ್ಯ ಸದಸ್ಯನ ಖಾತೆಗೆ 170*5= ಒಟ್ಟು 850 ರೂ. ಖಾತೆಗೆ ಜಮೆಯಾಗಲಿದೆ

ನಿಮಗೆ ಈ ಯೋಜನೆಯ (Annabhagya Yojane) ಹಣ ಜಮೆಯಾಗುತ್ತಿಲ್ಲವೇ?

ಸರ್ಕಾರವು ಪ್ರತೀ ತಿಂಗಳು ಮುಖ್ಯ ಸದಸ್ಯನ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಪಾವತಿಸುತ್ತಿದ್ದು, ಆಧಾರ್ ಲಿಂಕ್ ಇರುವ ಖಾತೆಗೆ ನೇರವಾಗಿ ಜಾಮೆಯಾಗಿತ್ತಿದೆ, ಒಂದು ವೇಳೆ ನಿಮಗೆ ಒಂದೂ ಕಂತಿನ ಹಣ ಜಮೆಯಾಗಿಲ್ಲದಿದ್ದಲ್ಲಿ ಕಾರಣ ತಿಳಿದುಕೊಳ್ಳಿ.

ನಿಮ್ಮ ಆಧಾರ್ ಹಾಗೂ ರೇಷನ್ ಕಾರ್ಡ್ ನಲ್ಲಿ ಹೆಸರು, ವಿಳಾಸ ಇತರ ವಿವರ ಒಂದೇ ರೀತಿ ಇರಬೇಕು, ಬದಲಾವಣೆ ಇದ್ದಲ್ಲಿ ನಿಮ್ಮ ಖಾತೆಗೆ ಹಣ ಜಮೆ ಸಾದ್ಯವಿಲ್ಲ, ಕೂಡಲೇ ಅದನ್ನು ಸರಿಪಡಿಸಿಕೊಳ್ಳಿ.

ಇನ್ನು ನಿಮ್ಮ ಬ್ಯಾಂಕ್ ಖಾತೆ ಜೊತೆ ಆಧಾರ್ ಲಿಂಕ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ, ಒಂದುವೇಳೆ ನಿಮ್ಮ ಆಧಾರ್ ಜೊತೆ ಬ್ಯಾಂಕ್ ಖಾತೆ ಲಿಂಕ್ ಆಗದೇ ಇದ್ದಲ್ಲಿ ನಿಮ್ಮ ಖಾತೆಗೆ ಹಣ ಬರುವುದಿಲ್ಲ.

ಇನ್ನು ನಿಮಗೆ ಬಂದಿರುವ ಹಣದ ವಿವರವನ್ನು DBT Karnataka ಆ್ಯಪ್ ಮೂಲಕ ಚೆಕ್ ಮಾಡಿಕೊಳ್ಳಬಹುದಾಗಿದೆ, ಇದರ ವಿವರವನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ

ಈ ಒಂದು ಆ್ಯಪ್ ಇದ್ದರೆ ಸಾಕು, ಗೃಹಲಕ್ಷ್ಮಿ, ಅನ್ನಭಾಗ್ಯ ಸೇರಿದಂತೆ ಎಲ್ಲಾ ಯೋಜನೆಯ ಹಣದ ಮಾಹಿತಿ ಪಡೆಯಿರಿ : DBT Karnataka

ಹಾಗೂ ನಿಮಗೆ ಬಂದಿರುವ ಹಣದ ವಿವರ ಹಾಗೂ ಸ್ಥಿಗತಗೊಂಡಿರುವ ಕಾರಣ ತಿಳಿಯಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಚೆಕ್ ಮಾಡಬಹುದಾಗಿದೆ, ಈ ಕೆಳಗಿನ ಲೇಖನದಲ್ಲಿ ಚೆಕ್ ಮಾಡುವ ವಿಧಾನ ತೋರಿಸಲಾಗಿದೆ.

ನಿಮಗೆ ಬಂದಿರುವ ಅನ್ನಭಾಗ್ಯ ಹಣವನ್ನು ಇಲ್ಲಿ ಚೆಕ್ ಮಾಡಿ|annabhagya DBT amount check

ಇನ್ನು ಲೋಕಸಭೆ ಚುನಾವಣೆಯ ಸಮಯದಿಂದ ಹಣ ಜಮಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಿದ್ದು, ಈಗ ಹಂತ ಹಂತವಾಗಿ ವಲಯವಾರು ಬಾಕಿ ಉಳಿದಿರುವ ತಿಂಗಳ ಹಣವನ್ನು ಖಾತೆಗೆ ಜಮೆ ಮಾಡಲಾಗುತ್ತಿದೆ, ಈಗಾಗಲೇ ಜೂನ್ ಹಾಗೂ ಜುಲೈ ತಿಂಗಳ ಹಣ ಜಮೆ ಮಾಡಲಾಗಿದೆ.

ಗೃಹಲಕ್ಷ್ಮಿ ಯೋಜನೆ ಸ್ಥಗಿತಗೊಂಡಿದೆಯೇ? ಜೂನ್- ಜುಲೈ ಹಣ ಯಾವಾಗ ಬರಲಿದೆ? ಇಲ್ಲಿದೆ ಮಾಹಿತಿ : Gruha lakshmi july update

ಈ ಯೋಜನೆಯಡಿಯಲ್ಲಿ ಮಕ್ಕಳಿಗೆ ಪ್ರತೀ ತಿಂಗಳು 4000ರೂ. ಸಿಗಲಿದೆ, ಯಾರು ಅರ್ಜಿ ಸಲ್ಲಿಸಬಹುದು ಇಲ್ಲಿದೆ ವಿವರ Financial assistance for children


Share this page
WhatsApp Group Join Now
Telegram Group Join Now